ಶಿವಮೊಗ್ಗ: ಶಿವಮೊಗ್ಗದ ಹೃದಯ ಭಾಗದಲ್ಲಿರುವ ಅಶೋಕ ವೃತ್ತದಲ್ಲಿರುವ ರಾಷ್ಟ್ರ ಲಾಂಛನದ ಮೇಲೆ ಸಂಘಪರಿವಾರದ ಕಾರ್ಯಕರ್ತರು ಭಗವಾ ಧ್ವಜ ಹಾರಿಸಿದ ದೇಶ ದ್ರೋಹಿ ಘಟನೆ ವರದಿಯಾಗಿದೆ.
ಸಾರ್ವಜನಿಕ ಗಣೇಶ ಚತುರ್ಥಿ ಪ್ರಯುಕ್ತ ಹಿಂದೂ ಮಹಾಸಭಾ ಏರ್ಪಡಿಸಿದ್ದ ಗಣಪತಿ ಮೂರ್ತಿ ವಿಸರ್ಜನಾ ಕಾರ್ಯಕ್ರಮದ ಭಾಗವಾಗಿ ಅಶೋಕ್ ವೃತ್ತದಲ್ಲಿರುವ ರಾಷ್ಟ್ರ ಲಾಂಛನದ ಮೇಲೆ ಭಗವಾ ಧ್ವಜವನ್ನು ಹಾರಾಡಿಸುವ ಮೂಲಕ ಸಮಾಜದ ಅಶಾಂತಿಗೆ ನಾಂದಿ ಹಾಡಿದ್ದಾರೆ. ಇದು ದೇಶದ್ರೋಹವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಿದರೂ ಯಾವುದೇ ಕಾನೂನು ಕ್ರಮ ಜರುಗಿಸಲಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ತಿಂಗಳು ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೂ ಸಾವರ್ಕರ್ ಪೋಟೋ ಅಳವಡಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಮತ್ತು ಅಶೋಕ್ ವೃತ್ತದ ಸುತ್ತಮುತ್ತಲಿನಲ್ಲಿ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿತ್ತು.
ಇದು ವಿವಾದವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಅಶೋಕ ವೃತ್ತದಲ್ಲಿ ಅಳವಡಿಸಲಾಗಿದ್ದ ಭಾಗವಾ ಧ್ವಜವನ್ನು ವಶಪಡಿಸಿಕೊಂಡಿದೆ. ಈ ಕುರಿತು ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ, ಯಾರಾದರೂ ದೂರು ನೀಡಿದರೆ ಪ್ರಕರಣ ದಾಖಲಿಸಲಾಗುವುದೆಂದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.