ಏಷ್ಯಾ ಕಪ್‌| ʻಮಿನಿ ಫೈನಲ್ʼನಲ್ಲಿ ಶ್ರೀಲಂಕಾ-ಪಾಕಿಸ್ತಾನ ಮುಖಾಮುಖಿ

Prasthutha|

ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಟೂರ್ನಿಯು ಬಹುತೇಕ ಅಂತಿಮ ಹಂತ ತಲುಪಿದೆ. ಸೆಪ್ಟಂಬರ್‌ 11ರ ಭಾನುವಾರದಂದು ದುಬೈನಲ್ಲಿ ಪಾಕಿಸ್ತಾನ- ಶ್ರೀಲಂಕಾ ತಂಡಗಳ ನಡುವೆ ಫೈನಲ್‌ ಹಣಾಹಣಿ ನಡೆಯಲಿದೆ. ಟಾಸ್‌ ಗೆದ್ದ ಶ್ರೀಲಂಕಾ, ಪಾಕಿಸ್ತಾನ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

- Advertisement -

ಫೈನಲ್‌ ಪಂದ್ಯದ ಪೂರ್ವಭಾವಿ ಎಂಬಂತೆ, ಶುಕ್ರವಾರ ನಡೆಯುವ ಸೂಪರ್‌ 4 ಹಂತದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ- ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಫಲಿತಾಂಶವು ಟೂರ್ನಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಎದುರಾಳಿಗಳ ಬಲ- ದೌರ್ಬಲ್ಯಗಳನ್ನು ಅರಿಯಲು ಉಭಯ ತಂಡಗಳಿಗೂ ಅವಕಾಶ ಒದಗಿಸಲಿದೆ.

ಈ ಬಾರಿಯ ಏಷ್ಯಾ ಕಪ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಲಂಕಾ- ಪಾಕ್‌ ಮುಖಾಮುಖಿಯಾಗುತ್ತಿವೆ. ಸೂಪರ್‌ 4 ಹಂತದಲ್ಲಿ ಈ ತಂಡಗಳು ಭಾರತ ಮತ್ತು ಅಫ್ಘಾನಿಸ್ತಾನವನ್ನು ಮಣಿಸಿ ಫೈನಲ್‌ ಹಂತಕ್ಕೆ ಅರ್ಹತೆ ಪಡೆದಿವೆ. 2014ರ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾ, ಪ್ರಮುಖ ಟೂರ್ನಿಯೊಂದರ ಫೈನಲ್‌ ಪ್ರವೇಶಿಸಿದೆ.

- Advertisement -

‌ಏಷ್ಯಾ ಕಪ್‌ ಟೂರ್ನಿಗೂ ಮೊದಲು ಲಂಕಾ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ ಅಲ್ಲಿ ಎರಡು ಟೆಸ್ಟ್‌ ಪಂದ್ಯಗಳನ್ನಾಡಿತ್ತು. ಎರಡು ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯು ಡ್ರಾದಲ್ಲಿ ಕೊನೆಗೊಂಡಿತ್ತು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಈವರೆಗೂ 21 ಬಾರಿ ಮುಖಾಮುಖಿಯಾಗಿದ್ದು, 13 ಬಾರಿ ಪಾಕಿಸ್ತಾನ ಗೆಲುವಿನ ನಗೆ ಬೀರಿದ್ದರೆ, 8 ಬಾರಿ ಶ್ರೀಲಂಕಾ ಮೇಲುಗೈ ಸಾಧಿಸಿದೆ.

ಪಾಕಿಸ್ತಾನದ ಪ್ಲೇಯಿಂಗ್ ಇಲೆವೆನ್: ಮೊಹಮ್ಮದ್ ರಿಜ್ವಾನ್(ವಿಕೆಟ್‌ ಕೀಪರ್), ಬಾಬರ್ ಅಜಮ್(ನಾಯಕ), ಫಖರ್ ಝಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಮುಹಮ್ಮದ್ ನವಾಝ್, ಉಸ್ಮಾನ್ ಖಾದಿರ್, ಹಾರಿಸ್‌ ರೌಫ್, ಮುಹಮ್ಮದ್ ಹಸ್ನೈನ್, ಹಸನ್ ಅಲಿ

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್‌ ಕೀಪರ್), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಪ್ರಮೋದ್ ಮಧುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ



Join Whatsapp