ವಿವಿಧ ದರ್ಜೆಯ ಅಕ್ಕಿಗಳ ಮೇಲೆ ರಫ್ತು ತೆರಿಗೆ: ಒಡೆದ ಅಕ್ಕಿ ರಫ್ತಿಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ

Prasthutha|

ನವದೆಹಲಿ: ವಿವಿಧ ದರ್ಜೆಯ ಅಕ್ಕಿಗಳ ಮೇಲೆ ಶೇಕಡಾ ರಫ್ತು ತೆರಿಗೆಯನ್ನು ವಿಧಿಸಿದ ಕೇಂದ್ರ ಸರ್ಕಾರ, ಒಡೆದ ಅಕ್ಕಿ ರಫ್ತಿಗೆ ನಿಷೇಧ ಹೇರಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಶುಕ್ರವಾರ ಈ ಆದೇಶ ಹೊರಡಿಸಿದೆ.

- Advertisement -

ರಫ್ತು ನೀತಿಯನ್ನು ತಿದ್ದುಪಡಿ ಮಾಡಲಾಗಿದ್ದು, ಮುರಿದ ಅಕ್ಕಿ ಮೇಲೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ. ಆದರೆ ಸೆಪ್ಟೆಂಬರ್ 9-15ರ ನಡುವೆ ಆರಂಭವಾದ ಲೋಡಿಂಗ್,ಈಗಾಗಲೇ ಬಿಲ್ ಮಾಡಿರುವ, ಬಂದರ್ ತಲುಪಿರುವ ಹಡಗು ಅಥವಾ ಕಸ್ಟಮ್ಸ್’ಗೆ ಹಸ್ತಾಂತರಿಸಿದ ಅಕ್ಕಿ ಸರಕುಗಳಿಗೆ ಈ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ಪ್ರಮುಖ ಅಕ್ಕಿ ಉತ್ಪಾದಿಸುವ ರಾಜ್ಯಗಳಲ್ಲಿ ಕಳಪೆ ಮಳೆಯಿಂದಾಗಿ ಮುರಿದ ಅಕ್ಕಿಯ ರಫ್ತು ಮತ್ತು ವಿವಿಧ ದರ್ಜೆಯ ಅಕ್ಕಿಗಳ ಮೇಲೆ ರಫ್ತು ತೆರಿಗೆಯನ್ನು ವಿಧಿಸಲಾಗಿತ್ತು.



Join Whatsapp