‘ದೆಹಲಿಗೆ ಅಡಿವಸ್ತ್ರ ಖರೀದಿಸಲು ತೆರಳಿದ್ದೆ’: ಪತ್ರಕರ್ತರ ಪ್ರಶ್ನೆಗೆ ಹೀನವಾಗಿ ಉತ್ತರಿಸಿದ ಜಾರ್ಖಂಡ್ ಮುಖ್ಯಮಂತ್ರಿ ಸಹೋದರ

Prasthutha|

ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸಹೋದರ ಮತ್ತು ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ಶಾಸಕ ಬಸಂತ್ ಸೊರೆನ್ ಅವರ ಇತ್ತೀಚಿನ ದೆಹಲಿ ಭೇಟಿಯ ಕುರಿತು ಸುದ್ದಿಗಾರರು ಕೇಳಿದಾಗ ಅನಿರೀಕ್ಷಿತ ಪ್ರತಿಕ್ರಿಯೆಯನ್ನು ನೀಡಿದರು.

- Advertisement -

ಇತ್ತೀಚಿನ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಸಂತ್ ಸೊರೆನ್ ದೆಹಲಿಗೆ ತೆರಳಿದ್ದರು. ಅಲ್ಲಿಂದ ಮರಳಿದ ಬಳಿಕ ಪತ್ರಕರ್ತರು ಈ ಬಗ್ಗೆ ಅವರಲ್ಲಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಬಸಂತ್ ಸೊರೆನ್ ‘ನನ್ನ ಒಳ ಉಡುಪುಗಳು ಖಾಲಿಯಾಗಿದ್ದವು, ಆದ್ದರಿಂದ ನಾನು ಅವುಗಳನ್ನು ಖರೀದಿಸಲು ದೆಹಲಿಗೆ ಹೋದೆ. ನಾನು ಅದನ್ನು ಅಲ್ಲಿಂದ ಪಡೆಯುತ್ತೇನೆ ”ಎಂದು ಹೇಳಿದ್ದಾರೆ.

ವರದಿಗಾರರು ಅವರನ್ನು ಮತ್ತಷ್ಟು ಪ್ರಚೋದಿಸಿದಾಗ, “ಹೌದು, ನಾನು ಅದನ್ನು ಅಲ್ಲಿಂದ ಪಡೆಯುತ್ತೇನೆ” ಎಂದು ಹೇಳಿದ್ದಾರೆ.

- Advertisement -

ಪ್ರಕರಣವೊಂದರ ಸಂಬಂಧ ಮುಖ್ಯಮಂತ್ರಿ ಹೇಮಂತ್ ಸೊರೆನ್‌ರನ್ನು ಅನರ್ಹಗೊಳಿಸಿ, ಸರಕಾರವನ್ನು ಅಸ್ಥಿರಗೊಳಿಸುವ ಯೋಜನೆಯನ್ನು ಬಿಜೆಪಿ ಹಾಕಿದೆ ಎಂಬ ಸಂಶಯದ ಮೇರೆಗೆ ಆಡಳಿತಾರೂಢ ಸಮ್ಮಿಶ್ರ ಸರಕಾರದ 32 ಶಾಸಕರನ್ನು ಆಗಸ್ಟ್ 30 ರಂದು ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ರೆಸಾರ್ಟ್‌ಗೆ ಕರೆದೊಯ್ಯಲಾಗಿತ್ತು.

ಆದರೆ ಮತ್ತೆ ಬಹುಮತ ಸಾಬೀತುಪಡಿಸುವಲ್ಲಿ ಹೇಮಂತ್ ಸೊರೆನ್ ಯಶಸ್ವಿಯಾಗಿದ್ದರು. ಈ ಬೆಳವಣೆಗೆಯ ನಡುವೆ ಬಸಂತ್ ಸೊರೆನ್ ದೆಹಲಿ ಪ್ರವಾಸ ಕೈಗೊಂಡಿದ್ದರು.



Join Whatsapp