ನಾನು ಗೋ ಮಾಂಸ ತಿನ್ನುತ್ತೇನೆ: ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

Prasthutha|

ನವದೆಹಲಿ: ನಾನು ಈ ಮೊದಲು ಗೋ ಮಾಂಸ ತಿನ್ನುತ್ತಿದ್ದೆ. ಈಗಲೂ ತಿನ್ನುತ್ತೇನೆ ಎಂದು ‘ದಿ ಕಾಶ್ಮೀರ್ ಫೈಲ್ಸ್​’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯ ಹಳೆಯ ವೀಡಿಯೋ ಒಂದು ವ್ಯಾಪಕ ವೈರಲ್ ಆಗಿದೆ.

- Advertisement -

ವಿವೇಕ್ ಅಗ್ನಿಹೋತ್ರಿ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಆ ವೀಡಿಯೋದಲ್ಲಿ ತಾವು ಗೋಮಾಂಸ ತಿನ್ನುವ ವಿಚಾರವನ್ನು ಅವರು ಒಪ್ಪಿಕೊಂಡಿದ್ದರು.

ಸಿನಿಮಾ ಪ್ರಚಾರಕ್ಕಾಗಿ ರಣಬೀರ್ ಹಾಗೂ ಆಲಿಯಾ ಭಟ್ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ‘ನಾನು ಗೋ ಮಾಂಸ ತಿನ್ನುತ್ತೇನೆ’ ಎಂದು ರಣಬೀರ್ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಇಟ್ಟುಕೊಂಡು ಸಂಘಪರಿವಾರದ ಕಾರ್ಯಕರ್ತರು ದೇವಸ್ಥಾನದ ಒಳಗೆ ತೆರಳಲು ಅಡ್ಡಿಪಡಿಸಿದ್ದರು. ಈ ಬೆನ್ನಲ್ಲೇ ವಿವೇಕ್​ ಅಗ್ನಿಹೋತ್ರಿ ಹಳೆಯ ವೀಡಿಯೋ ವೈರಲ್ ಮಾಡಿ ಅವರು ಈ ಮೊದಲು ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಪೂಜೆ ಸಲ್ಲಿಸಿ ಬಂದಿದ್ದರು. ‘ವಿವೇಕ್ ಅಗ್ನಿಹೋತ್ರಿ ಗೋ ಮಾಂಸ ತಿಂದಿದ್ದಾರೆ. ಅವರಿಗೆ ಏಕೆ ಅವಕಾಶ ನೀಡಿದ್ದಿರಿ’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.



Join Whatsapp