ಕಾಡಾನೆ ತುಳಿತಕ್ಕೆ ಕೂಲಿ ಕಾರ್ಮಿಕ ಬಲಿ

Prasthutha|

ಚಿಕ್ಕಮಗಳೂರು: ಕಾಡಾನೆ ತುಳಿತಕ್ಕೆ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮದಲ್ಲಿ ಗುರುವಾರ ನಡೆದಿದೆ.

- Advertisement -

ತೋಟದ ಕೆಲಸಕ್ಕೆ ಹೋದ ಅರ್ಜುನ್(47) ಮೃತಪಟ್ಟವರು. ಒಂಟಿ ಸಲಗ ಅವರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ ಎನ್ನಲಾಗಿದೆ.

ಊರುಬಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು,ಗ್ರಾಮಸ್ಥರು ಆತಂಕದಲ್ಲಿದ್ದಾರೆ.

- Advertisement -

ಗೋಣಿಬೀಡು ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.



Join Whatsapp