ಕಡಬ: ಮರ ಕಡಿಯುವಾಗ ವಿದ್ಯುತ್ ತಗುಲಿ ವ್ಯಕ್ತಿ ಸಾವು

Prasthutha|

ಕಡಬ: ಮರ ಕಡಿಯುವಾಗ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಅನಡ್ಕ ಎಂಬಲ್ಲಿ ನಡೆದಿದೆ. ಕುಂತೂರಿನ ಅನಡ್ಕ ನಿವಾಸಿ ಮನೋಜ್ ಮೃತರು ಎಂದು ತಿಳಿದು ಬಂದಿದೆ.

- Advertisement -


ಮನೋಜ್ ಮರದ ರೆಂಬೆ ಕಡಿಯುವಾಗ ವಿದ್ಯುತ್ ತಂತಿ ತಗುಲಿದೆ. ಮನೋಜ್ ಅವರ ಮೃತದೇಹ ಮರದಲ್ಲಿ ನೇತಾಡಿದ್ದನ್ನು ಜನರು ನೋಡಿದ್ದಾರೆ‌. ಕಡಬ ಮೆಸ್ಕಾಂ ಹಾಗೂ ಪೊಲೀಸರು ಭೇಟಿ ನೀಡಿ ಮೃತದೇಹ ಕೆಳಗಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp