ಶೋಕಾಚರಣೆ: ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

Prasthutha|

ಬೆಂಗಳೂರು: ಅರಣ್ಯ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ನಿಧನಕ್ಕೆ ರಾಜ್ಯ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದ್ದು, ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕತ್ತಿಯವರು ನಿಧನರಾಗಿದ್ದಾರೆ. ನನಗೆ ಒಳ್ಳೆಯ ಸ್ನೇಹಿತ ಎಂದು ಹೇಳಿದರು. ಶೋಕಾಚರಣೆ ಮೂರು ದಿನ ಮಾಡಬಹುದಿತ್ತು. ಯಾಕೆ ಒಂದೇ ದಿನ ಘೋಷಣೆ ಮಾಡಿದ್ದಾರೋ ಗೊತ್ತಿಲ್ಲ. ಅವರು ಸಿಟ್ಟಿಂಗ್ ಮಿನಿಸ್ಟರ್ ಆಗಿರೋರು. ಮೂರು ದಿನ ಘೋಷಿಸಬಹುದಿತ್ತು. ನಾನು ಅದರ ಬಗ್ಗೆ ಮಾತಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಾಮಾನ್ಯವಾಗಿ ಗಣ್ಯರ ನಿಧನ ಸಂದರ್ಭದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸುವ ಪದ್ಧತಿ ಇದೆ. ಎಚ್ ಎಸ್ ಮಹಾದೇವ ಪ್ರಸಾದ್, ಅಂಬರೀಷ್, ಗಿರೀಶ್ ಕಾರ್ನಾಡ್, ಸಿದ್ದಗಂಗಾಶ್ರೀ, ಪೇಜಾವರ ಶ್ರೀ ಮುಂತಾದವರ ನಿಧನರಾದಾಗ ಮೂರು ದಿನ ಶೋಕಾಚರಣೆಯನ್ನು ಸರ್ಕಾರ ಘೋಷಿಸಿತ್ತು. ಆದರೆ ರಾಜ್ಯ ಸರ್ಕಾರ ನಾಳೆಯ ಜನೋತ್ಸವಕ್ಕಾಗಿ ಒಂದೇ ದಿನ ಶೋಕಾಚರಣೆ ಘೋಷಿಸಿತಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.



Join Whatsapp