ಬೆಂಗಳೂರಿನಲ್ಲಿ ಜಲಪ್ರಳಯ: ನಗರೀಕರಣವು ವಿಪರೀತವಾಗಿದೆ ಎಂದ ತೆಲಂಗಾಣ ಸಚಿವ

Prasthutha|

ಹೈದರಾಬಾದ್: ಭಾರೀ ಮಳೆಯ ಕಾರಣಕ್ಕೆ ಬೆಂಗಳೂರು ಬಹುಪಾಲು ನೀರಿನಲ್ಲಿ ಮುಳುಗಿದೆ. ನೆರೆಯ ರಾಮನಗರ ಜಿಲ್ಲೆ ಮೊದಲಾದವುಗಳು ಸಹ ಪ್ರವಾಹದಲ್ಲಿ ಬಳಲಿವೆ.

- Advertisement -

ನಿರಂತರವಾಗಿ ಮಳೆಯ ನೀರು ನಗರದಲ್ಲಿ ಹರಿದಿರುವುದರಿಂದ ಜನರು ದೋಣಿ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಬೆಂಗಳೂರಿನ ರಸ್ತೆಗಳನ್ನು ದಾಟುತ್ತಿರುವುದು ಕಂಡು ಬರುತ್ತಿದೆ.

ಪಕ್ಕದ ತೆಲಂಗಾಣದ ಸಚಿವ ಕೆ. ಟಿ. ರಾಮರಾವ್ ಅವರು ಬೆಂಗಳೂರು ಬಗ್ಗೆ ಹೇಳಿದ್ದು ಹೀಗಿದೆ. “ಬೆಂಗಳೂರು ಭಾರೀ ನಗರವಾಗಿ ಬೆಳೆದಿದೆ ಮತ್ತು ಸಹ ನಗರೀಕರಣವು ವಿಪರೀತವಾಗಿದೆ. ಆದರೆ ಅದಕ್ಕೆ ತಕ್ಕಂತೆ ಮೂಲಸೌಕರ್ಯ ಉನ್ನತಿಗಾಗಿ ಸಾಕಷ್ಟು ಖರ್ಚು ಮಾಡಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

- Advertisement -

“ಎಲ್ಲರೂ ನೀರು ತುಂಬಿದ ಬೆಂಗಳೂರನ್ನು ವಿನೋದ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯನ್ನು ಚಾಲನೆ ಮಾಡುವ ಹಣಕಾಸಿನ ಎಂಜಿನ್ ಗಳು ನಮ್ಮ ನಗರಗಳು. ಒಂದೇ ಸಮನೆ ನಗರೀಕರಣ ಮತ್ತು ಸಹ ನಗರೀಕರಣ ಆಗುವಾಗ ಅದಕ್ಕೆ ತಕ್ಕಂತೆ ನಾವು ಉನ್ನತೀಕರಣಕ್ಕೆ ಬಂಡವಾಳ ವ್ಯಯಿಸುವುದಿಲ್ಲ. ನನ್ನ ರಾಜ್ಯದ ರಾಜಧಾನಿಯ ಸಹಿತ ಭಾರತದ ಯಾವುದೇ ನಗರವು ಇಂದಿನ ಹವಾಮಾನ ಬದಲಾವಣೆಯ ಪ್ರಾಕೃತಿಕ ವಿಪತ್ತಿಗೆ ಬಲಿಯಾಗುವಂತೆ ಇದೆ” ಎಂದೂ ಟಿಕೆಆರ್ ಬರೆದಿದ್ದಾರೆ.

“ಭಾರತವು ಈ ನಿಟ್ಟಿನಲ್ಲಿ ಅಭಿವೃದ್ಧಿ ಕಾಣಬೇಕಾದರೆ, ನಾವು ಮೂಲಭೂತ ಸಂರಚನೆಗಳಿಗೆ ರಾಜ್ಯ ಮತ್ತು ಕೇಂದ್ರ ದರಕಶರಗಳು ಒಗ್ಗೂಡಿ ಹೆಚ್ಚಿನ ಬಂಡವಾಳ ಹೂಡಬೇಕಾಗುತ್ತದೆ” ಎಂದು ಸಹ ಅವರು ಟ್ವೀಟಿದ್ದಾರೆ.

ನಗರ ಯೋಜನೆ ಮತ್ತು ಆಡಳಿತದಲ್ಲಿ ಹೆಚ್ಚು ಗಟ್ಟಿ ಮತ್ತು ಕಠಿಣ ಹೆಜ್ಜೆ ಇಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಈಗ ನಾವಿದ್ದೇವೆ.
ಉತ್ತಮ ರಸ್ತೆ, ನೀರು, ಗಾಳಿ, ಮಳೆ ನೀರು ನಿರ್ವಹಣೆ ಇವೆಲ್ಲ ನಗರ ನಿರ್ವಹಣೆಯ ಅವಿಭಾಜ್ಯ ಅಂಗಗಳಾಗಿದ್ದು. ಹೆಚ್ಚಿನ ಬಂಡವಾಳ ಮತ್ತು ನಿಗಾ ಈ ಬಗೆಗೆ ಅಗತ್ಯವಿದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾದ ಹರ್ದೀಪ್ ಪುರಿಯವರು ಕೂಡಲೆ ಬೆಂಗಳೂರಿನಂಥ ನಗರಗಳಿಗೆ ಸಹಾಯ ಹಸ್ತ ಚಾಚಬೇಕು. ಕೆಲವು ಬೆಂಗಳೂರು ನಾಯಕರೂ ಹಾಗೇ ಇರುವಂತೆ ಕಾಣುತ್ತದೆ. ಅವರಿಗೂ ಕೇಂದ್ರದ ಸಹಾಯ ಬೇಕು. ನಾವು ಒಂದು ದೇಶವಾಗಿ ಬೆಳೆಯಬೇಕಾದರೆ ನಾವು ಪ್ರತಿಯೊಬ್ಬರ ಅನುಭವದಿಂದ ಕಲಿತುಕೊಳ್ಳಬೇಕು ಮತ್ತು ಒಟ್ಟಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು” ಎಂದು ಕೆಟಿಆರ್ ಹೇಳಿದರು.




Join Whatsapp