ಅಸ್ಸಾಮ್ | ಮುಂದುವರಿದ ಇಸ್ಲಾಮ್ ವಿರೋಧಿ ನೀತಿ ; ಮತ್ತೊಂದು ಮದರಸಾ ನೆಲಸಮ

Prasthutha|

ಗುವಾಹಟಿ: ಅಸ್ಸಾಮ್’ನಲ್ಲಿ ಇಸ್ಲಾಮ್ ವಿರೋಧಿ ನೀತಿ ಮುಂದುವರಿದಿದ್ದು, ಮತ್ತೊಂದು ಮದರಸಾವನ್ನು ಧ್ವಂಸಗೊಳಿಸಿರುವ ಘಟನೆ ಅಸ್ಸಾಮ್’ನ ಗೋಲ್’ಪಾರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಮಟಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪಖಿಯುರಾ ಚಾರ್’ನಲ್ಲಿರುವ ಮದರಸಾ ಮತ್ತು ಅದರ ಅಕ್ಕಪಕ್ಕದಲ್ಲಿರುವ ಮನೆಗಳನ್ನು ದೇಶ ವಿರೋಧಿ ಚಟುವಟಿಕೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಧ್ವಂಸಗೊಳಿಸಲಾಗಿದೆ.

ಇದು ಈಶಾನ್ಯ ರಾಜ್ಯದಲ್ಲಿ ನೆಲಸಮಗೊಳಿಸಿದ ನಾಲ್ಕನೇ ಮದರಸಾ ಎಂದು ತಿಳಿದು ಬಂದಿದೆ.



Join Whatsapp