ಲಖನೌ: ಐದು ಬಾರಿ ಶಾಸಕರಾಗಿದ್ದ ಅರವಿಂದ್ ಗಿರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಲಖೀಂಪುರ ಖೇರಿಯ ಗೋಖರನಾಥ್ ವಿಧಾನಸಭಾ ಕ್ಷೇತ್ರದಿಂದ ಇವರು ಸ್ಪರ್ಧಿಸುತ್ತಿದ್ದರು.
ಇವರಿಗೆ 64 ವರ್ಷ ವಯಸ್ಸಾಗಿತ್ತು.
ಹೃದಯದ ಯಾವುದೇ ಸಮಸ್ಯೆ ಇರದೇ ಆರೋಗ್ಯವಾಗಿದ್ದ ಅರವಿಂದ್ ಗಿರಿ ಅವರು ಲಖನೌಗೆ ತೆರಳುತ್ತಿದ್ದರು. ಆದರೆ ದಾರಿಮಧ್ಯೆ ಸುಸ್ತು ಎನಿಸಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.