ಅನಾರೋಗ್ಯದ ಮಧ್ಯೆಯೇ ಅತೀಕುರ್ ರಹಮಾನ್‌ರನ್ನು ಜೈಲಿಗೆ ವಾಪಸ್ ಕಳುಹಿಸಿದ ಪೋಲೀಸರು: AIMSನಲ್ಲಿ ಉನ್ನತ ಚಿಕಿತ್ಸೆಗೆ ಕ್ಯಾಂಪಸ್ ಫ್ರಂಟ್ ಆಗ್ರಹ

Prasthutha|

ಲಕ್ನೋ: ತೀವ್ರ ಅನಾರೋಗ್ಯದ ನಡುವೆಯೂ ಅತೀಕುರ್ರಹ್ಮಾನ್‌ನನ್ನು ಆಸ್ಪತ್ರೆಯಿಂದ ಮತ್ತೆ ಲಕ್ನೋ ಜೈಲಿಗೆ ಕಳುಹಿಸಿರುವ ಉತ್ತರ ಪ್ರದೇಶ ಪೊಲೀಸರ ನಡೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿದ್ದು, ಇದು ದ್ವೇಷ ರಾಜಕಾರಣದ ನೀಚ ಕೃತ್ಯವಾಗಿದೆ ಎಂದು ಆರೋಪಿಸಿದೆ. ಅಲ್ಲದೇ ಹೆಚ್ಚುವರಿ ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ AIMS ಗೆ ದಾಖಲಿಸಬೇಕೆಂದು ಕ್ಯಾಂಪಸ್ ಫ್ರಂಟ್ ಅಧ್ಯಕ್ಷ ಎಂ.ಎಸ್ ಸಾಜಿದ್ ಆಗ್ರಹಿಸಿದ್ದಾರೆ.

- Advertisement -

ಹತ್ರಾಸ್ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ತೆರಳಿದ್ದಾಗ ಅತೀಕುರ್ರಹ್ಮಾನ್‌ರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಆ ಬಳಿಕ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಜೈಲಿನಿಂದ ಲಕ್ನೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಆಸ್ಪತ್ರೆಯಲ್ಲಿನ ಅಸಮರ್ಪಕ ಸೌಲಭ್ಯಗಳಿಂದಾಗಿ ಅವರ ಆರೋಗ್ಯವು ಹದಗೆಟ್ಟಿತು. ಅಲ್ಲದೇ ಅವರ ದೇಹದ ಎಡಭಾಗವು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ.

- Advertisement -

ನರ ಸಂಬಂಧಿತ ಸಮಸ್ಯೆಗಳಿಂದಾಗಿ ಅವರಿಗೆ ತಮ್ಮ ಮಕ್ಕಳನ್ನು ಅಥವಾ ಸಂಬಂಧಿಕರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರ ಕುಟುಂಬವು ಹೇಳಿದೆ. ಈ ಸಮಸ್ಯೆಗೆ ಅವರು ಇದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಅಂತಹ ಸ್ಥಿತಿಯಲ್ಲಿ, ಅವನನ್ನು ಮತ್ತೆ ಜೈಲಿಗೆ ಕಳುಹಿಸುವುದು ಅವರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಎಂ.ಎಸ್ ಸಾಜಿದ್ ಹೇಳಿದ್ದಾರೆ.

ಏಮ್ಸ್‌ನ ವೈದ್ಯರು ನೀಡಿದ್ದ ವೈದ್ಯಕೀಯ ಸಲಹೆಗಳನ್ನು ಯುಪಿ ಸರಕಾರ ಅವರಿಗೆ ನಿರಾಕರಿಸಿದ್ದು, ಕೈದಿಗಳಿಗೆ ಚಿಕಿತ್ಸೆ, ಜಾಮೀನು ವಿಚಾರದಲ್ಲಿ ಸರಕಾರ ಪ್ರತಿಕೂಲವಾಗಿ ವರ್ತಿಸಬಾರದೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp