ಬೆಂಗಳೂರು ಮುಳುಗಿರುವುದು ಮಳೆಯಲ್ಲಲ್ಲ, ಬಿಜೆಪಿಯ 40% ಕಮಿಷನ್ ಭ್ರಷ್ಟಾಚಾರದಲ್ಲಿ: ಕಾಂಗ್ರೆಸ್

Prasthutha|

ಬಿಜೆಪಿ ಸಚಿವರು ಜಟ್ಕಾ ಕಟ್, ಹಲಾಲ್ ಕಟ್ ವಿಚಾರ ಮಾತಾಡಲು ಓಡೋಡಿ ಬರ್ತಾರೆ

- Advertisement -

ಬೆಂಗಳೂರು: ಐಟಿ ಕಂಪೆನಿಗಳ ಬೆಂಗಳೂರು ತೊರೆಯುವ ಎಚ್ಚರಿಕೆಯ ಪತ್ರಕ್ಕೆ ಸಿಎಂ ಬೊಮ್ಮಾಯಿ ಅವರ ಉತ್ತರವೇನು?. ಈ ಗಂಭೀರ ವಿಚಾರಕ್ಕೆ ಇನ್ನೂ ಮೌನವೇಕೆ? ಸ್ವತಃ ಸಿಎಂ ಬೆಂಗಳೂರು ಉಸ್ತುವಾರಿಯನ್ನು ಹೊಂದಿದ್ದಾರೆ, ನಗರಾಭಿವೃದ್ಧಿ ಇಲಾಖೆಯೂ ಸಿಎಂ ಬಳಿಯೇ ಇದೆ. ಎಲ್ಲವನ್ನೂ ಸಿಎಂ ಹೊಂದಿದ್ದರೂ ಬೆಂಗಳೂರಿಗೆ ಈ ಸ್ಥಿತಿ ಬಂದಿದ್ದೇಕೆ? #BjpDrownsBengaluru ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.

ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಖಾತೆಯಿಂದ ಸರಣಿ ಟ್ವೀಟ್ ಮಾಡಲಾಗಿದ್ದು, ಬೆಂಗಳೂರು ಮುಳುಗಿರುವುದು ಮಳೆಯಲ್ಲಲ್ಲ, ಬಿಜೆಪಿಯ 40% ಕಮಿಷನ್ ಭ್ರಷ್ಟಾಚಾರದಲ್ಲಿ. ಹಲವು ತಿಂಗಳ ಹಿಂದೆ ಬಿಜೆಪಿ ನಾಯಕ ಎಸ್ ಎಂ ಕೃಷ್ಣ ಬೆಂಗಳೂರಿನ ದುರಾವಸ್ಥೆಯ ಬಗ್ಗೆ ಧ್ವನಿ ಎತ್ತಿದ್ದರು. ಹಲವು ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದರು, ಈಗ ಐಟಿ ಕಂಪೆನಿಗಳು ಪತ್ರ ಬರೆದಿವೆ. ಬೊಮ್ಮಾಯಿ ಅವರೇ, ತಾವು ಎಚ್ಚರಾಗಲು ಇನ್ನೇನಾಗಬೇಕು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

- Advertisement -

ಮಳೆಗೆ ಬೆಂಗಳೂರು ಮತ್ತೆ ನಲುಗಿದೆ. ಸನ್ಮಾನ್ಯ ಬೊಮ್ಮಾಯಿಯವರು ಹುಬ್ಬಳ್ಳಿಯಲ್ಲಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಈ ರಾಜ್ಯಕ್ಕೆ ಗೃಹ ಸಚಿವರೋ, ಅಥವಾ ತಮ್ಮ ಕ್ಷೇತ್ರಕ್ಕೆ ಮಾತ್ರ ಗೃಹ ಸಚಿವರೋ ತಿಳಿಯದಾಗಿದೆ. ಬೆಂಗಳೂರಿನ ಸಪ್ತ ಸಚಿವರು ನಾಪತ್ತೆಯಾಗಿದ್ದಾರೆ. ಬಿಜೆಪಿ ‘ಜನೋತ್ಸವ’ದ ತಯಾರಿಯಲ್ಲಿದೆ. #BjpDrownsBengaluru ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಬೆಂಗಳೂರಿನ ನಗರವನ್ನು ಪ್ರತಿನಿಧಿಸುವ 7 ಸಚಿವರು ಜಟ್ಕಾ ಕಟ್, ಹಲಾಲ್ ಕಟ್ ವಿಚಾರ ಮಾತಾಡಲು ಓಡೋಡಿ ಬರ್ತಾರೆ. ಸಾವರ್ಕರ್ ವಿಚಾರ ಮಾತಾಡಲು ಮುನ್ನುಗ್ಗುತ್ತಾರೆ. ಆದರೆ ಬೆಂಗಳೂರು ಮಳೆ ಅವಾಂತರಕ್ಕೆ ಮಾತ್ರ ಬಾಯಿ ಬಿಡದೆ ಬಿಲ ಸೇರಿಕೊಂಡಿದ್ದೇಕೆ? ಬೆಂಗಳೂರಿನ ಬಗ್ಗೆ ಮಾತಾಡಲೂ ಸಹ ಸಚಿವರಿಗೆ 40% ಕಮಿಷನ್ ಕೊಡಬೇಕೆ? ಎಂದು ಪ್ರಶ್ನಿಸಿದೆ.

ಮೊನ್ನೆ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಿಂತು ಡಬಲ್ ಇಂಜಿನ್ ಅಭಿವೃದ್ಧಿಯಾಗುತ್ತಿದೆ ಎಂದಿದ್ದು ಇದೇನಾ ಬೊಮ್ಮಾಯಿ ಅವರೇ? ರಸ್ತೆ ಮೇಲೆ ನೀರು, ನೀರಿನೊಳಗೆ ರಸ್ತೆಯ ಗುಂಡಿ, ಬೆಂಗಳೂರಲ್ಲಿ ಸಂಚರಿಸುವ ವಾಹನಗಳಿಗೆ ಸಿಂಗಲ್ ಇಂಜಿನ್ ಸಾಲದು, ಡಬಲ್ ಇಂಜಿನ್ಗಳೇ ಬೇಕು! ಇದೇ ಬಿಜೆಪಿಯ ಡಬಲ್ ಇಂಜಿನ್ ಅಭಿವೃದ್ಧಿ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಪಿಎಸ್ ಐ ಹಗರಣದ ಮೂಲ ಇರುವುದು ವಿಧಾನಸೌಧದಲ್ಲೇ ಎಂಬ ನಮ್ಮ ಪ್ರತಿಪಾದನೆಗೆ ಈಗ ಸಾಕ್ಷ್ಯ ಸಿಕ್ಕಿದೆ. ಬಿಜೆಪಿ ಶಾಸಕ ಬಸವರಾಜ್ ದಡೇಸಗೂರ ಅವರು ಅಭ್ಯರ್ಥಿಯ ಬಳಿ 15 ಲಕ್ಷ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಇಡೀ ಬಿಜೆಪಿಯೇ ಬಾಗಿಯಾಗಿರುವುದು ನಿಶ್ಚಿತ. ಬೊಮ್ಮಾಯಿ ಅವರೇ, ತನಿಖೆ ವಿಸ್ತರಿಸಿ ಶಾಸಕರನ್ನು ಬಂಧಿಸುವುದು ಯಾವಾಗ? ಎಂದು ಕಾಂಗ್ರೆಸ್ ಕೇಳಿದೆ.

ಪಿಎಸ್ ಐ ಹಗರಣ ತನಿಖೆಯನ್ನು ಕೇವಲ ಅಧಿಕಾರಿಗಳ ಮಟ್ಟದಲ್ಲೇ ಮೊಟಕುಗೊಳಿಸಿ ವಿಧಾಸೌಧದಲ್ಲಿನ ಭ್ರಷ್ಟ ಕುಳಗಳು ಬಚಾವಾಗಲು ಯತ್ನಿಸಿವೆ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ, ನಮ್ಮದು ಪಾರದರ್ಶಕ ತನಿಖೆ ಎಂದಿದ್ದ ಬೊಮ್ಮಾಯಿ ಅವರೇ, ಸಚಿವ @drashwathcn ಅವರ ತನಿಖೆ ನಡೆಸದಿರುವುದೇಕೆ? ನಿಮ್ಮ ಶಾಸಕ ಬಸವರಾಜ್ ದಡೇಸಗೂರರವರನ್ನು ತನಿಖೆ ಮಾಡುವುದು ಯಾವಾಗ? ಎಂದು ಪ್ರಶ್ನಿಸಿದೆ.

ಬಿಜೆಪಿಯ ಸಚಿವರು, ಶಾಸಕರು ಪಾಲು ಹಂಚಿಕೊಂಡು PSI ಹಗರಣವನ್ನು ನಡೆಸಿದ್ದಾರೆ. ರಾಜಕಾರಣಿಗಳ, ಸಚಿವರ ಹಸ್ತಕ್ಷೇಪವಿಲ್ಲದೆ ಇಷ್ಟು ವ್ಯಾಪಕವಾದ ಹಗರಣ ನಡೆಯಲು ಸಾಧ್ಯವೇ ಇಲ್ಲ. ಬೊಮ್ಮಾಯಿ ಅವರೇ, PSI ಅಕ್ರಮದಲ್ಲಿ ನಿಮ್ಮ ಸಂಪುಟದ ಸಚಿವರ ಹೆಸರು ಬಂದರೂ ಸುಮ್ಮನಿದ್ದೀರಿ, ನಿಮ್ಮ ಶಾಸಕರ ಹೆಸರು ಬಂದರೂ ಸುಮ್ಮನಿದ್ದೀರಿ. ಇದೇನಾ ಪಾರದರ್ಶಕತೆ? ಎಂದು ಕಾಂಗ್ರೆಸ್ ಕುಟುಕಿದೆ.




Join Whatsapp