ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಿದ ಶೈಲಜಾ ಟೀಚರ್: ಕಾರಣವೇನು ಗೊತ್ತಾ?

Prasthutha|

ತಿರುವನಂತಪುರಂ: ಆರೋಗ್ಯ ಕ್ಷೇತ್ರದಲ್ಲಿನ‌ ಸಾಧನೆಗಾಗಿ ಕೇರಳದ ಮಾಜಿ ಆರೋಗ್ಯ ಸಚಿವೆ, ಹಾಲಿ ಶಾಸಕಿ ಕೆ.ಕೆ ಶೈಲಜಾ ಅವರಿಗೆ ನೀಡಲು ಉದ್ದೇಶಿಸಿದ್ದ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕರಿಸಲು ಅವರು ನಿರಾಕರಿಸಿದ್ದಾರೆ.

- Advertisement -

‘ಮ್ಯಾಗ್ಸೆಸೆ ಪ್ರಶಸ್ತಿ ಸಮಿತಿಯಿಂದ ನನಗೆ ಪತ್ರ ಬಂದಿದೆ. ಸಿಪಿಐಎಂ ಕೇಂದ್ರ ಸಮಿತಿಯ ಸದಸ್ಯನಾಗಿ, ನಾನು ಈ ಬಗ್ಗೆ ನನ್ನ ಪಕ್ಷದೊಂದಿಗೆ ಚರ್ಚಿಸಿದ್ದೇನೆ ಮತ್ತು ಪ್ರಶಸ್ತಿಯನ್ನು ಸ್ವೀಕರಿಸದಿರಲು ನಾವು ಒಟ್ಟಾಗಿ ನಿರ್ಧರಿಸಿದ್ದೇವೆ’ ಎಂದು ಮಾಜಿ ಆರೋಗ್ಯ ಸಚಿವರು ಹೇಳಿದ್ದಾರೆ.

ಫಿಲಿಪೈನ್‌ನ ಮಾಜಿ‌ ಅಧ್ಯಕ್ಷ ರಾಮೊನ್ ಮ್ಯಾಗ್ಸೆಸೆ ಹೆಸರಿನಲ್ಲಿ ವಿವಿಧ ಕ್ಷೆತ್ರದ ಸಾಧಕರಿಗೆ ಕೊಡಮಾಡುವ ಈ ಪ್ರಶಸ್ತಿಯನ್ನು ಮಾಜಿ ಆರೋಗ್ಯ ಸಚಿವರು ನಿರಾಕರಿಸಲು ಹಲವು ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ. ಕಮ್ಯೂನಿಸ್ಟರ ವಿರುದ್ಧದ ಮ್ಯಾಗ್ಸೆಸೆ ಅವರ ಕ್ರೂರತೆಯೇ ಪ್ರಮುಖ ಕಾರಣ ಎಂದು ಪಕ್ಷದ ಹಲವು ನಾಯಕರು ವಿವರಿಸಿದ್ದಾರೆ.

- Advertisement -

‘ಈ ಪ್ರಶಸ್ತಿಯು ಫಿಲಿಪೈನ್‌ನಲ್ಲಿ ಕಮ್ಯುನಿಸ್ಟರ ವಿರುದ್ಧ ಕ್ರೂರ ದಬ್ಬಾಳಿಕೆಯ ಇತಿಹಾಸವನ್ನು ಹೊಂದಿರುವ ರಾಮೊನ್ ಮ್ಯಾಗ್ಸೆಸೆ ಅವರ ಹೆಸರಿನಲ್ಲಿದೆ. ಈ ಎಲ್ಲಾ ಅಂಶಗಳನ್ನು ಒಟ್ಟಾಗಿ ಮನಗಂಡ ಅವರು ಈ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದಾರೆ’ ಎಂದು ಪಕ್ಷದ ಮುಖಂಡ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಕೋರೋನಾ ಸಂದರ್ಭದ ಆರೋಗ್ಯ ಬಿಕ್ಕಟ್ಟನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಕ್ಕಾಗಿ ಅವರನ್ನು 64 ನೇ ಮ್ಯಾಗ್ಸೆಸೆ ಪ್ರಶಸ್ತಿಗೆ ಪರಿಗಣಿಸಲಾಗಿತ್ತು.



Join Whatsapp