ಬೆಂಗಳೂರು | ಐಟಿ ಸಂಸ್ಥೆಗಳನ್ನು ಸ್ಥಳಾಂತರಿಸುವ ಎಚ್ಚರಿಕೆ ನೀಡಿದ ORRCA

Prasthutha|

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆಯ ಅವಾಂತರಕ್ಕೆ ಜನರ ಹೊರತಾಗಿ ಐಟಿ ಸಂಸ್ಥೆಗಳು (ORRCA) ಕೂಡ ಬೇಸತ್ತು ಹೋಗಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ನಗರ ಪ್ರದೇಶಗಳು ಬಹುತೇಕ ಜಲಾವೃತವಾಗಿದೆ. ಇದರಿಂದ ಸಂಕಷ್ಟಕ್ಕೊಳಗಾದ ಐಟಿ ಸಂಸ್ಥೆಗಳು, ಈ ಸಮಸ್ಯೆಗಳನ್ನು ಸರಿಪಡಿಸದಿದ್ದರೆ ಅವುಗಳನ್ನು ಸ್ಥಳಾಂತರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ಎಚ್ಚರಿಸಿವೆ.

- Advertisement -

ನಗರದ ಮಾರತಹಳ್ಳಿಯ ಸರ್ಜಾಪುರ ಔಟರ್ ರಿಂಗ್ ರಸ್ತೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ರಸ್ತೆಗಳಲ್ಲಿ ನೀರು ತುಂಬಿದೆ. ಇದರಿಂದಾಗಿ ಐಟಿ ಕಂಪೆನಿಗಳಿಗೆ ಸಾಕಷ್ಟು ನಷ್ಟವಾಗಿವೆ. ಮಳೆಯಿಂದಾಗಿ ಐಟಿ ಕಂಪೆನಿಗಳಿಗೆ ಸುಮಾರು 225 ಕೋಟಿ ರೂ. ನಷ್ಟ ಹೊಂದಿದೆ ಎಂದು ಆಡಳಿತ ಮಂಡಳಿಯವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸರ್ಕಾರ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಐಟಿ ಕಂಪೆನಿಗಳು ಪರ್ಯಾಯ ಸ್ಥಳಗಳಿಗೆ ಸ್ಥಳಾಂತರಗೊಳ್ಳುವುದಾಗಿ ಎಚ್ಚರಿಸಿದೆ.

ಐಟಿ ಕಾರಿಡಾರಿನಲ್ಲಿ ಸುಸಜ್ಜಿತ ಮೂಲಸೌಕರ್ಯಗಳನ್ನು ವ್ಯವಸ್ಥೆಗೊಳಿಸದಿದ್ದರೆ ಐಟಿ ಕಂಪೆನಿಗಳನ್ನು ಸ್ಥಳಾಂತರಿಸಲಾಗುವುದೆಂದು ಸೆಪ್ಟೆಂಬರ್ 1 ರಂದು ಮುಖ್ಯಮಂತ್ರಿ ಬರೆದ ಪತ್ರದಲ್ಲಿ ಐಟಿ ಕಂಪೆನಿಗಳ ಸಂಘ ಸೂಚಿಸಿದೆ.

- Advertisement -

ನಗರದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು, ಕೆ.ಆರ್. ಪುರಂ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಸುಧಾರಣೆಯನ್ನು ಮಾಡುವುದು, ಬಿಎಂಟಿಸಿ ಸಂಸ್ಥೆ ವೋಲ್ವೋ ಬಸ್’ಗಳನ್ನು ವ್ಯವಸ್ಥೆಗೊಳಿಸುವುದು, ವಾಹನಗಳ ದಟ್ಟವನ್ನು ತಡೆಯಲು ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧ ಹೇರುವುದು, ಪಾದಚಾರಿ ಹಾಗೂ ಸೈಕಲ್ ಸವಾರರಿಗೆ ಸೂಕ್ತ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡುವುದು, ಪಾದಚಾರಿಗೆ ರಸ್ತೆ ದಾಟಲು ಸುಲಭವಾಗುವಂತೆ ಪ್ರತಿ 500 ಮೀಟರ್’ಗೆ ಮೇಲ್ಸೇತುವೆ ನಿರ್ಮಾಣ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ORRCA ಪತ್ರದಲ್ಲಿ ತಿಳಿಸಿದೆ.



Join Whatsapp