ಮಂಗಳೂರು: ನಗರದ ಕೂಳೂರು ಗೋಲ್ಡ್ ಪಿಂಚ್ ಮೈದಾನದಲ್ಲಿ ಆಯೋಜಿಸಿದ್ದ ಮೋದಿ ಕಾರ್ಯಕ್ರಮಕ್ಕೆ ನಿರೀಕ್ಷಿಸಿದಷ್ಟು ಜನಸ್ತೋಮ ಸೇರದ ಹಿನ್ನೆಲೆಯಲ್ಲಿ ಬಿಜೆಪಿ ನಿರಾಸೆ ಅನುಭವಿಸಿದ್ದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಸುಳ್ಳಿನ ಮೊರೆ ಹೋದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೋಲ್ಕತ್ತಾದ ವೀಡಿಯೋ ಹಾಕಿ ಇದು ಮೋದಿ ಮಂಗಳೂರು ಭೇಟಿ ಸಂದರ್ಭದಲ್ಲಿ ಸೇರಿದ ಜನಸಾಗರ ಎಂದು ಟ್ವೀಟ್ ಮಾಡಿ ಪೇಜಿಗೆ ಸಿಲುಕಿದ್ದಾರೆ.
ಹೇಳಲು ಸರಕಾರಿ ಕಾರ್ಯಕ್ರಮವಾದರೂ ವಾಸ್ತವದಲ್ಲಿ ಬಿಜೆಪಿಗರ ಶಕ್ತಿಪ್ರದರ್ಶನಕ್ಕೆ ಬೇಕಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವಾಗಿತ್ತು ಮೋದಿ ಮಂಗಳೂರು ಭೇಟಿ. ಈ ಕಾರ್ಯಕ್ರಮಕ್ಕೆ ನಿರೀಕ್ಷಿಸಿದಷ್ಟು ಜನದಟ್ಟಣೆ ಇರದ ಹಿನ್ನೆಲೆಯಲ್ಲಿ ಮೋದಿ ಅಲೆಯೆಂದು ಬಿಂಬಿಸಲು ಅಮಿತ್ ಮಾಳವಿಯಾ 2019ರ ಕೋಲ್ಕತ್ತಾ ರ‍್ಯಾಲಿಯ ವೀಡಿಯೋ ವನ್ನು ಹಾಕಿ ಮಂಗಳೂರಿನದ್ದು ಎಂದು ಬರೆದುಕೊಂಡಿದ್ದಾರೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಮೋದಿ ಅಲೆಯೆಂದು ಬಿಂಬಿಸಲು ಹಳೇ ವೀಡಿಯೋವನ್ನು ಹಂಚಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅಪಹಾಸ್ಯಕ್ಕೀಡಾಗಿದ್ದಾರೆ.