ಕಾಶ್ಮೀರದ 370ನೇ ವಿಧಿ ರದ್ದು ಪರವಾಗಿ ಮತ ಚಲಾಯಿಸಿದ್ದ ಗುಲಾಂ ನಬಿ ಆಝಾದ್: ಅಪ್ನಿ ಪಕ್ಷದ ಮುಖ್ಯಸ್ಥ ಆರೋಪ

Prasthutha|

ಕಾಶ್ಮೀರ: ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಬೂಟಾಟಿಕೆಯ ಮನುಷ್ಯ. 2019ರಲ್ಲಿ ಸಂಸತ್ತಿನಲ್ಲಿ ಆಝಾದ್ 370ನೇ ವಿಧಿಯ ಪರವಾಗಿ ಮಾತನಾಡಬೇಕಿತ್ತು; ಆದರೆ ಅವರು ಅದನ್ನು ರದ್ದುಪಡಿಸುವ ಪರವಾಗಿ ಮತ ಚಲಾಯಿಸಿದರು ಎಂದು ಜಮ್ಮು ಮತ್ತು ಕಾಶ್ಮೀರದ ಅಪ್ನಿ ಪಕ್ಷದ ಮುಖ್ಯಸ್ಥ ಅಲ್ತಾಫ್ ಬುಖಾರಿ ಆರೋಪಿಸಿದ್ದಾರೆ.

- Advertisement -


“ಆಝಾದ್ ಸಾಹೇಬರು 370 ವಿಧಿ ಬೇಕೇ ಬೇಕು ಎಂದು ಒಂದು ಐತಿಹಾಸಿಕ ಭಾಷಣ ಮಾಡಬೇಕಿತ್ತು; ತನ್ನ ಅಂಗಿಯ ಎರಡು ಗುಂಡಿ ಹರಿದು ಆಕ್ರೋಶ ತೋರಬೇಕಾಗಿತ್ತು; ಸಂಸತ್ತಿನಲ್ಲಿ ಬಳಕೆ ಸಾಧ್ಯದ ಎಲ್ಲ ಶಬ್ದ ಬಳಸಿ ಬಯ್ಯಬೇಕಾಗಿತ್ತು. ಆದರೆ ಸತ್ಯ ಬೇರೆಯೇ ಆಗಿತ್ತು. ಆದರೆ 370ನೇ ರದ್ದು ಪಡಿಸಲು ಬಿಜೆಪಿ ಪರ ಅವರು ಮತ ಚಲಾಯಿಸಿದರು. ಸತ್ಯ ಹೇಳುವುದು ಅಪರಾಧವಾದರೆ, ನಾನು ಅದನ್ನು ಮಾಡಿ ಅಯಿತು” ಎಂದು ಶ್ರೀನಗರದಲ್ಲಿ ಮಾತನಾಡುತ್ತ ಅಲ್ತಾಫ್ ಬುಖಾರಿ ಹೇಳಿದರು.
ಅವರಿದ್ದ ಪಕ್ಷವು ಈ ಪ್ರದೇಶದ ಜನರಿಗೆ ಭೂಮಿ ನೀಡಲು, ಉದ್ಯೋಗ ಪಡೆಯಲು ಅವಕಾಶ ಮಾಡಿ ಕೊಟ್ಟಿತ್ತು. ಈಗ ಜಮ್ಮು ಕಾಶ್ಮೀರದವರು ರಾಜ್ಯದ ಸ್ಥಾನಮಾನ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ಜೆಕೆಎಪಿ- ಜಮ್ಮು ಕಾಶ್ಮೀರ ಅಪ್ನಿ ಪಕ್ಷದ ಮುಖ್ಯಸ್ಥರು ಹೇಳಿದರು.


“ನಮ್ಮ ನಿಯೋಗವು ಬೇಗನೆ ಲೆಫ್ಟಿನೆಂಟ್ ಗವರ್ನರ್ ರನ್ನು ಭೇಟಿಯಾಗಿ ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನ ಮರು ಸ್ಥಾಪಿಸುವಂತೆ ಒತ್ತಾಯಿಸಲಾಗುವುದು. ಜಮ್ಮು ಕಾಶ್ಮೀರದ ಎಲ್ಲ ಜಿಲ್ಲಾ ಮ್ಯಾಜಿಸ್ಟ್ರೇಟರಲ್ಲಿಯೂ ಇದೇ ಒತ್ತಾಯವನ್ನು ಮಂಡಿಸಲಾಗುವುದು. ಕೆಲವರು ಚುನಾವಣೆಯ ಬಳಿಕ ರಾಜ್ಯದ ಸ್ಥಾನಮಾನ ಮತ್ತೆ ಸ್ಥಾಪಿಸಲಾಗುವುದು ಎನ್ನುತ್ತಿದ್ದಾರೆ. ಅದನ್ನು ಈಗಲೆ ಏಕೆ ಮಾಡಬಾರದು” ಎಂದೂ ಅಲ್ತಾಫ್ ಬುಖಾರಿ ಕೇಳಿದರು.
ಮಾಜಿ ಮಂತ್ರಿಯಾಗಿದ್ದ ಅಲ್ತಾಫ್ ಬುಖಾರಿಯವರು 2020ರಲ್ಲಿ ಅಪ್ನಿ ಪಕ್ಷ ಸ್ಥಾಪಿಸಿದರು. ಇಲ್ಲಿನ ಬಹುತೇಕ ಯುವಕರು ಮುನ್ನೆಚ್ಚರಿಕೆಯ ಬಂಧನದಲ್ಲಿ ಇದ್ದಾರೆ.

- Advertisement -


“ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಯುವಕರನ್ನು ಬಿಡುಗಡೆ ಮಾಡುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಕೆಲವು ಯುವಕರನ್ನು ಅವರ ಅಪ್ಪ 1994ರಲ್ಲಿ ಅನುಸರಿಸಿದ ತತ್ವಕ್ಕಾಗಿ ಬಂಧಿಸಲಾಗಿದೆ; ಆಗ ಇವರು ಹುಟ್ಟಿಯೇ ಇರದವರೇ ಹೆಚ್ಚು. ಎಷ್ಟೋ ಜನರನ್ನು ಅವರ ದೂರದ ನೆಂಟರು ಯಾರೋ ಉಗ್ರರು ಎಂಬ ದೂರಿನ ಮೇಲೆ ಬಂಧಿಸಲಾಗಿದೆ. ಈ ಕ್ರೂರ ಪದ್ಧತಿ ಇಲ್ಲಿಗೇ ನಿಲ್ಲಬೇಕು.” ಅಲ್ತಾಫ್ ಬುಖಾರಿ ಹೇಳಿದರು.
ಸರಿಯಾದ ನ್ಯಾಯಯುತ ವಿಧಾನವನ್ನು ಅನುಸರಿಸಲಾಗುತ್ತಿಲ್ಲವಾದ್ದರಿಂದ ಸಾಕಷ್ಟು ಯುವಕರು ಸೇನೆ, ಆಡಳಿತ ವಿಭಾಗದಲ್ಲಿ ನೌಕರಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಬುಖಾರಿ ತಿಳಿಸಿದರು.



Join Whatsapp