ಧರಾಶಾಹಿಯಾದ ಬೃಹತ್ ಮರ: ನೂರಾರು ಹಕ್ಕಿಗಳು ನಿರಾಶ್ರಿತ

Prasthutha|

ತಿರುವನಂತಪುರಂ: ರಸ್ತೆ ಅಭಿವೃದ್ಧಿಗಾಗಿ ಬೃಹತ್ ಮರವೊಂದನ್ನು ಉರುಳಿಸಿದ ಪರಿಣಾಮ ನೂರಾರು ಪಕ್ಷಿಗಳು ನಿರಾಶ್ರಿತವಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗಾಡಿ ನಗರದ ವಿಕೆ ಪಡಿ ಎಂಬಲ್ಲಿ ನಡೆದಿದೆ.

- Advertisement -


ಸಾವಿರಾರು ಪಕ್ಷಿಗಳು ನಿರಾಶ್ರಿತವಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಕ್ಷಿಪ್ರಿಯರು ಆಕ್ರೋಶ ಹೊರಹಾಕಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮರ ಉರುಳಿಸಿದ ಜೆಸಿಬಿ ಚಾಲಕನನ್ನು ಬಂಧಿಸಲಾಗಿದೆ.


ರಾಷ್ಟ್ರೀಯ ಹೆದ್ದಾರಿ 66 ಅನ್ನು ವಿಸ್ತರಣೆ ಮಾಡುವ ಸಲುವಾಗಿ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವನ್ನು ನೆಲಕ್ಕುರುಳಿಸಲಾಗಿದ್ದು, ಅದರಲ್ಲಿ ವಾಸಿಸುತ್ತಿದ್ದ ನೂರಾರು ಪಕ್ಷಿಗಳು ಸಾವನ್ನಪ್ಪಿದೆ. ಜೊತೆಗೆ ಹಲವು ಪಕ್ಷಿಗಳು ನಿರಾಶ್ರಿತರಾಗಿವೆ.



Join Whatsapp