ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದೋಖಾ: ಮೋದಿ ನೀಡಿದ ಭರವಸೆ ನೆನಪಿಸಿದ ಕಾಂಗ್ರೆಸ್

Prasthutha|

ಬೆಂಗಳೂರು: ಕರ್ನಾಟಕದಲ್ಲಿ ಎರಡು ಬಾರಿ ಪ್ರವಾಹ ಬಂದರೂ ತಿರುಗಿ ನೋಡದ ಪ್ರಧಾನಿಗಳು ಚುನಾವಣೆ ಸಮೀಪಿಸುತ್ತಿರುವಾಗ ಉದ್ಘಾಟನೆ ನೆಪ ಮಾಡಿಕೊಂಡು ರಾಜ್ಯಕ್ಕೆ ಬರುತ್ತಿದ್ದಾರೆ. ಕರ್ನಾಟಕಕ್ಕೆ ಬರಬೇಕಿದ್ದ GST ಪಾಲು ನೀಡಲಿಲ್ಲ. ಇದರ ಬಗ್ಗೆ ಬಿಜೆಪಿ 25 ಸಂಸದರು ಧ್ವನಿ ಎತ್ತಲಿಲ್ಲ. ಆದರೆ ಕನ್ನಡದಲ್ಲಿ ಟ್ವಿಟ್ ಮಾಡಿದ ತಕ್ಷಣ ಬಿಜೆಪಿಗರು ಹಿಗ್ಗಿದರು ! ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.

- Advertisement -

ಡಬಲ್ ಇಂಜಿನ್ ಸರ್ಕಾರ, ಡಬಲ್ ಕಮಿಷನ್ ಸರ್ಕಾರ! ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುವುದು, ಕನ್ನಡಿಗರಿಗೆ ತೆರಿಗೆ ಹಣ ನೀಡದಿರುವುದು, ಇದು ಡಬಲ್ ಇಂಜಿನ್ ಸರ್ಕಾರದ ಡಬಲ್ ದೋಖಾ! ಎಂದು ಟೀಕಿಸಿದೆ.

ತಮಿಳುನಾಡಿಗೆ 13 ಮೆಡಿಕಲ್ ಕಾಲೇಜುಗಳನ್ನು ನೀಡಿ, ಕನ್ನಡಿಗರಿಗೆ ದೊಡ್ಡ “0” ನೀಡಿದ ಕೇಂದ್ರ ಬಿಜೆಪಿ ಸರ್ಕಾರ. ರಾಜ್ಯ ಬಿಜೆಪಿ ಸರ್ಕಾರ ಕಮಿಷನ್ ದಂಡೆಯಲ್ಲಿ ತೊಡಗಿದ್ದರೂ ಪ್ರಧಾನಿ ಧ್ವನಿ ಎತ್ತಲಿಲ್ಲ !. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು – ಧ್ವನಿ ಎತ್ತಲಿಲ್ಲ ! ಸರಣಿ ಹತ್ಯೆಗಳಾದರು ಕಠಿಣ – ಕ್ರಮ ತೆಗೆದುಕೊಳ್ಳಲಿಲ್ಲ ! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

- Advertisement -

ಈ ಬಿಜೆಪಿಗರಿಗೆ ಕರ್ನಾಟಕ ಬೇಕಿರುವುದು ಕೇವಲ ಚುನಾವಣೆಗಾಗಿ, ಕೋಮುಗಲಭೆ ಸೃಷ್ಟಿ ಮಾಡುವುದಕ್ಕಾಗಿ ಮಾತ್ರ ! ಕಾಂಗ್ರೆಸ್ ಸರ್ಕಾರವನ್ನು 10% ಸರ್ಕಾರ ಎಂದು ಉದ್ದುದ್ದ ಭಾಷಣ ಮಾಡುತಿದ್ದ ಪ್ರಧಾನಿಗಳು ತಮ್ಮದೇ ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ನಲ್ಲಿ ತೊಡಗಿಸಿಕೊಂಡಿದ್ದರು ಧ್ವನಿ ಎತ್ತುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದೆ.

ಜನರಿಗೆ ಕೊಟ್ಟ ಭರವಸೆಯನ್ನು ಮರೆಯುವುದರಲ್ಲಿ ಪ್ರಧಾನಿ ಮೋದಿ ಸದಾ ಮುಂದು. ಕಳೆದ ಎಂಟು ವರ್ಷದಲ್ಲಿ ಅವರು ರಾಜ್ಯಕ್ಕೆ ಕೊಟ್ಟಿರುವ ಕೊಡುಗೆ ಇದೊಂದೇ. ಇದೀಗ ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಜನರಿಗೆ ಮತ್ಯಾವ ಮೋಸದ ಕಥೆ ಹೆಣೆದಿದ್ದಾರೋ ಏನೋ ?! ಎಂದು ಕಾಂಗ್ರೆಸ್ ಹೇಳಿದೆ.

ರಾಜ್ಯಕ್ಕೆ ಮೋದಿ ಭೇಟಿ ಕೊಟ್ಟಾಗಲೆಲ್ಲಾ ಆಶ್ವಾಸನೆಗಳ ಮಳೆಯನ್ನೇ ಸುರಿಸುತ್ತಾರೆ. ಜನರಿಗೆ ಮಾತಿನಲ್ಲೇ ಅರಮನೆಯನ್ನೇ ಕಟ್ಟಿ ಕೊಡುತ್ತಾರೆ. ಮತ್ತೆ ಅವರಿಗೆ ಕರ್ನಾಟಕ ನೆನಪಾಗುವುದು ಇಲ್ಲಿಗೆ ಆಹ್ವಾನ ಸಿಕ್ಕಾಗಲೇ. ಇದು ಮೋದಿ ಅವರಿಗೆ ರಾಜ್ಯದ ಮೇಲಿರುವ ನಿರ್ಲಕ್ಷ್ಯ ಅಲ್ಲವೇ? ಎಂದು ಪ್ರಶ್ನಿಸಿದೆ.

ಕಳೆದ ಎಂಟು ವರ್ಷದಲ್ಲಿ ರಾಜ್ಯಕ್ಕೆ ಮೋದಿ ಎಷ್ಟು ಬಾರಿ ಆಗಮಿಸಿದ್ದಾರೋ ಆಗೆಲ್ಲಾ ಕೊಟ್ಟ ಭರವಸೆಗಳಲ್ಲಾ ಇನ್ನೂ ಹಾಗೇ ಉಳಿದಿವೆ. ಇದೀಗ ಮತ್ತೆ ಭೇಟಿ ನೀಡುತ್ತಿದ್ದಾರೆ. ಈಗ ಕೊಡುವ ಭರವಸೆ ಯಾವುವೋ, ಅವುಗಳು ಈಡೇರುವುದು ಯಾವಾಗಲೋ? ನೆರೆ ಬಂದಾಗ ಮೋದಿಗೆ ಅವರಿಗೆ ರಾಜ್ಯ ನೆನಪಾಗಲಿಲ್ಲ. ಪರಿಹಾರದ ಮಾತಾಡಲಿಲ್ಲ.  ಸಂತ್ರಸ್ತರ ಮೇಲೆ ಕರುಣೆಯನ್ನೂ ತೋರಿಸಲಿಲ್ಲ. ಇದೀಗ ಕರ್ನಾಟಕ ಇವರಿಗೆ ನೆನಪಾಗಿದೆ ಅಂದರೆ, ಅಲ್ಲಿಗೆ ರಾಜ್ಯದ ಜನರಿಗೆ ಮತ್ತೊಮ್ಮೆ ಮೋಸ ಕಾದಿದೆ ಎಂದೇ ಅರ್ಥ! #ModiMosa ಎಂದು ಹೇಳಿದೆ.

ರಾಜ್ಯಕ್ಕೆ ಬಂದಾಗಲೆಲ್ಲಾ ಮಾತಿನಲ್ಲೇ ಮೋಡಿ ಮಾಡಿ ಹೋಗುವುದೇ ಮೋದಿ ಅವರ ಸಾಧನೆ ಆಗಿದೆ. ಕೊಟ್ಟ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ. ಇದೀಗ ಮತ್ತಷ್ಟು ಸುಳ್ಳಿನ ಆಶ್ವಾಸನೆಗಳ ಜೊತೆ ಬರುತ್ತಿದ್ದಾರೆ. ಇದೀಗ ರಾಜ್ಯದ ಜನರು ಎಚ್ಚೆತ್ತುಕೊಳ್ಳಬೇಕಷ್ಟೇ ! #ModiMosa

ರಾಜ್ಯದಲ್ಲಿ ಎರಡು ಬಾರಿ ಪ್ರವಾಹ ಬಂದರೂ ಬಾರದ ಪ್ರಧಾನ ಮಂತ್ರಿ, ಕೇವಲ ಯೋಜನೆಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮಾತ್ರ ಆಗಮಿಸುತ್ತಿದ್ದಾರೆ. ಮೋದಿ ಅವರೇ ನಿಮಗೆ ಸಂತ್ರಸ್ತರ ಸಂಕಷ್ಟ ಕಾಣುತ್ತಿಲ್ಲವೇ? #ModiMosa

ಬಿಜೆಪಿಗೆ ಅಧಿಕಾರ ಕೊಟ್ಟ ಜನರಿಗೆ ಆಗುತ್ತಾ ಇರುವುದು ವಂಚನೆ.  ಒಂದು ಕಡೆ ರಾಜ್ಯ ಸರ್ಕಾರದಿಂದ ಜನರಿಗೆ ಅನ್ಯಾಯ, ಮತ್ತೊಂದು ಕಡೆ ಕರ್ನಾಟಕಕ್ಕೆ ಆಗಾಗ್ಗೆ ಬಂದು ಹೋಗುವ ಮೋದಿ ಅವರಿಂದಲೂ ಮಹಾ ಮೋಸ.  ಕೊಟ್ಟ ಭರವಸೆ ಈಡೇರುತ್ತಿಲ್ಲ. ರಾಜ್ಯ ಅಭಿವೃದ್ಧಿ ಕಾಣುತ್ತಿಲ್ಲ! #ModiMosa

ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಅನ್ನುವ ಮೋದಿ ರಾಜ್ಯ ಪ್ರವಾಸದ ವೇಳೆ ಇಲ್ಲಿ ಭ್ರಷ್ಟಾಚಾರ ತೊಲಗಿಸುವ ಮಾತನ್ನು ಆಡುವುದೇ ಇಲ್ಲ. ಇದು ಮೋದಿ ರಾಜ್ಯಕ್ಕೆ ಎಸಗುತ್ತಿರುವ ಮೋಸವಲ್ಲದೇ ಮತ್ತೇನೂ ಅಲ್ಲ. #ModiMosa ಯುವಕರಿಗೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ ಮೋದಿ ಅವರು ಇಂದಿಗೂ ಯುವಕರಿಗೆ ಉದ್ಯೋಗ ನೀಡದೆ ವಂಚಿಸಿದ್ದಾರೆ. #ModiMosa

ಎಲ್ಲಾ ಜಿಲ್ಲೆಗಳನ್ನೂ ಸ್ಮಾರ್ಟ್ ಸಿಟಿ ಮಾಡುತ್ತೇವೆ ಎಂದರು ಮೋದಿ. ಆದರೆ ಆಗಿರುವುದು ಏನು? ಈ ವರ್ಷದಲ್ಲಿ 2 ಬಾರಿ ರಾಜ್ಯಕ್ಕೆ ಬಂದ ಅವರು ಇದರ ಬಗ್ಗೆ ಮಾತಾಡಲಿಲ್ಲ ಯಾಕೆ? ಇದು ಮತ್ತೊಂದು ವಂಚನೆ ತಾನೆ? #ModiMosa ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.



Join Whatsapp