ಯೂಸ್ ಅಂಡ್ ಥ್ರೋ ಸಂಸ್ಕೃತಿಯಾಗಿ ಬದಲಾಗುತ್ತಿರುವ ವೈವಾಹಿಕ ಸಂಬಂಧ: ಕೇರಳ ಹೈಕೋರ್ಟ್‌

Prasthutha|

ಕೊಚ್ಚಿ: ಯುವಪೀಳಿಗೆಯು ವೈವಾಹಿಕ ಸಂಬಂಧಗಳನ್ನು ಹಗುರವಾಗಿ ಹಾಗೂ ಸ್ವಾರ್ಥಮಯವಾಗಿ ಪರಿಗಣಿಸುತ್ತಿದ್ದು, ಯೂಸ್ ಅಂಡ್ ಥ್ರೋ ಸಂಸ್ಕೃತಿ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ಕೇರಳ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.

- Advertisement -


ಕೇರಳದಲ್ಲಿ ವೈವಾಹಿಕ ಸಂಬಂಧಗಳು ಯೂಸ್ ಆ್ಯಂಡ್ ಥ್ರೋ ಗ್ರಾಹಕ ಸಂಸ್ಕೃತಿಯಿಂದ ಪ್ರಭಾವಿತವಾಗಿವೆ. ಲಿವ್ಇನ್‌ ಸಂಬಂಧಗಳು ಮತ್ತು ಸ್ವಾರ್ಥ, ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಯಾವುದೇ ಹೊಣೆಗಾರಿಕೆ ಮತ್ತು ಕಟ್ಟುಪಾಡುಗಳಿಲ್ಲದೆ ಮುಕ್ತ ಜೀವನವನ್ನು ಆನಂದಿಸಲು ಯುವ ಪೀಳಿಗೆಯು ಮದುವೆಯಿಂದ ದೂರವಿರಲು ಬಯಸುತ್ತಿದೆ ಎಂದು ಕೇರಳ ಹೈಕೋರ್ಟ್‌ ಹೇಳಿದೆ.


ಮದುವೆಯಾಗಿ ಒಂಬತ್ತು ವರ್ಷಗಳ ಬಳಿಕ ಹೆಂಡತಿ ಮತ್ತು ಮೂವರು ಹೆಣ್ಣುಮಕ್ಕಳನ್ನು ತೊರೆದಿದ್ದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ವಿವಾಹ ವಿಚ್ಛೇದನ ಪ್ರಕರಣವೊಂದರ ವೇಳೆ ಕೌಟುಂಬಿಕ ನ್ಯಾಯಾಲಯವೊಂದು ಪ್ರಕರಣವನ್ನು ವಜಾಗೊಳಿಸಿತ್ತು.

- Advertisement -


ಈ ಆದೇಶವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎ.ಮುಹಮ್ಮದ್‌ ಮುಷ್ತಾಕ್‌ ಮತ್ತು ಸೋಫಿ ಥಾಮಸ್‌ ಅವರಿದ್ದ ನ್ಯಾಯಪೀಠ, ಮೇಲ್ಮನವಿದಾರರ ಮನವಿಯನ್ನು ತಿರಸ್ಕರಿಸಿ, ಯಾವುದೇ ಆದೇಶ ನೀಡಲು ನಿರಾಕರಿಸುತ್ತಾ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.


ಅಕ್ರಮ ಸಂಬಂಧಗಳನ್ನು ಸಕ್ರಮಗೊಳಿಸಿಕೊಳ್ಳಲು ತಪ್ಪಿತಸ್ಥರಿಗೆ ನ್ಯಾಯಾಲಯವು ಸಹಕರಿಸಲಾರದು ಎಂದು ಪೀಠವು ಸ್ಪಷ್ಟವಾಗಿ ಹೇಳುವ ಮೂಲಕ, ವಿವಾಹೇತರ ಸಂಬಂಧದ ಆರೋಪ ಎದುರಿಸುತ್ತಿರುವ ಪತಿಯು ಪತ್ನಿಯಿಂದ ವಿಚ್ಛೇದನ ಪಡೆಯಲು ನಿರಾಕರಿಸಿತು.



Join Whatsapp