ವೇತನ ವಿಳಂಬ: 7 ಮಂದಿ ಕಾರ್ಮಿಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Prasthutha|

ಇಂದೋರ್: ವೇತನ ವಿತರಣೆ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಖಾಸಗಿ ಕಾರ್ಖಾನೆಯೊಂದರ ಏಳು ಮಂದಿ ಕಾರ್ಮಿಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

- Advertisement -

ಸದ್ಯ ಅವರನ್ನು ಸರ್ಕಾರಿ ಸ್ವಾಮ್ಯದ ಎಂವೈ ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ನಿಯಮಿತವಾಗಿ ವೇತನ ನೀಡದಿರುವುದಲ್ಲದೆ, ಅವರನ್ನು ಬೇರೆ ಶಾಖೆಗೆ ವರ್ಗಾಯಿಸಲಾಗುತ್ತಿದೆ ಎಂದು ಆರೋಪ ಕೇಳಿಬಂದಿದ್ದು, ತಮ್ಮ ಸಂಬಳವಿಲ್ಲದೆ ಖರ್ಚುಗಳನ್ನು ನಿರ್ವಹಿಸಲು ಕಷ್ಟವಾಗಿದ್ದರಿಂದ ತನ್ನ ಸ್ನೇಹಿತರು ವಿಷ ಸೇವಿಸಿದ್ದಾರೆ ಕಾರ್ಖಾನೆಯ ಉದ್ಯೋಗಿ ಅನಿಲ್ ನಿಗಮ್ ಹೇಳಿದ್ದಾರೆ.

- Advertisement -

ಕಾರ್ಖಾನೆಯ ಕಾರ್ಮಿಕರಿಗೆ ಕಳೆದ ಕೆಲವು ತಿಂಗಳಿಂದ ಸಂಬಳ ನೀಡಿಲ್ಲ. ಆದ್ದರಿಂದ ವಿಷ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಹೇಳಿಕೆಯನ್ನು ಅನುಸರಿಸಿ ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪರ್ದೆಶಿಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (ಎಸ್ ಐ) ಅಜಯ್ ಸಿಂಗ್ ಕುಶ್ವಾಹ ತಿಳಿಸಿದರು.




Join Whatsapp