ಹೋರಾಟಗಾರ್ತಿ ಸಫೂರ ಝರ್ಗರ್ ಕಾಲೇಜು ಪ್ರವೇಶ ರದ್ದು: NWF ಕಳವಳ

Prasthutha|

ಬೆಂಗಳೂರು: ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಎನ್.ಆರ್.ಸಿ ವಿರೋಧಿ ಹೋರಾಟಗಾರ್ತಿ ಸಫೂರ ಝರ್ಗರ್ ಅವರ ಪ್ರವೇಶ ರದ್ದುಗೊಳಿಸಿರುವುದರ ಹಿಂದೆ ಆಕೆಯ ಶಿಕ್ಷಣಕ್ಕೆ ಅಡ್ಡಿಪಡಿಸುವ ಕುತಂತ್ರವಿದೆ ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್ (NWF) ಆರೋಪಿಸಿದೆ.

- Advertisement -

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನೌಶಿರಾ ಬಾನು, ಮೂರು ಕೋವಿಡ್ ಪಾಸಿಟಿವ್, ಗರ್ಭಧಾರಣೆ, ಜೈಲು ಶಿಕ್ಷೆ ಮತ್ತು ಕುಟುಂಬದಲ್ಲಿ ತೀವ್ರವಾದ ಕೋವಿಡ್ ಸೋಂಕುಗಳ ತಗಲುವಿಕೆಯ ಹೊರತಾಗಿಯೂ ಅವರು ತಮ್ಮ ತಮ್ಮ ಎಂ.ಫಿಲ್ ಅನ್ನು ಪೂರ್ಣಗೊಳಿಸಿದ್ದರು. ಆದರೆ ಅವರ ಪ್ರಬಂಧವನ್ನು ಸಲ್ಲಿಸಲು ಹೋದಾಗ ಆಕೆಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಇದು ಯಾವುದೇ ಸಂಸ್ಥೆಯ ನೀತಿ ಸಂಹಿತೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ದೂರಿದ್ದಾರೆ.

ದಕ್ಷಿಣದಲ್ಲೂ ನಮ್ಮ ಅನೇಕ ಸಹೋದರಿಯರಿಗೂ ಇದೇ ರೀತಿಯ ಘಟನೆಗಳು ಎದುರಾಗಿದ್ದವು. ಹಿಜಾಬ್ ವಿವಾದದಿಂದಾಗಿ ಅವರನ್ನು ಪರೀಕ್ಷೆಗೆ ಹಾಜರಾಗದಂತೆ ತಡೆಯಲಾಯಿತು. ಹಕ್ಕುಗಳ ನಿರಾಕರಣೆಯ ಹಿಂದಿನ ಶಕ್ತಿಗಳ ಉದ್ದೇಶ ನಮ್ಮನ್ನು ಶಿಕ್ಷಣದಿಂದ ವಂಚಿಸುವುದಾಗಿದೆ. ಫ್ಯಾಶಿಸ್ಟ್ ಸರ್ಕಾರದ ವಿರುದ್ಧ ಯಾರೂ ಧ್ವನಿಯೆತ್ತದಂತೆ ಮಾಡಲು ಅವರು ನಮ್ಮನ್ನು ಅನಕ್ಷರಸ್ಥರಂತೆ ನೋಡಲು ಬಯಸುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ವಿಶ್ವವಿದ್ಯಾನಿಲಯದ ಈ ಕ್ರೂರ ವರ್ತನೆಯನ್ನು ನ್ಯಾಷನಲ್ ವುಮೆನ್ಸ್ ಫ್ರಂಟ್ ಕಟು ಶಬ್ದಗಳಿಂದ ಖಂಡಿಸುತ್ತದೆ. ಸಫೂರ ಝರ್ಗರ್ ಅವರಿಗೆ ಸರಿಯಾದ ಪ್ರವೇಶ ನೀಡಬೇಕು ಮತ್ತು ಅವರ ಶಿಕ್ಷಣವನ್ನು ಮುಂದುವರಿಸಲು ಅವಕಾಶವನ್ನು ನೀಡುವಂತೆ ಆಡಳಿತ ಮಂಡಳಿಯನ್ನು ಅವರು ಆಗ್ರಹಿಸಿದ್ದಾರೆ.



Join Whatsapp