ವಿವಾಹವಾಗುವಂತೆ ಒತ್ತಾಯಿಸಿ ಯುವಕನ ಹಿಂದೆ ಓಡಿದ ವಧು !

Prasthutha|

ಪಾಟ್ನಾ: ವಧುವೊಬ್ಬಳು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿ ಯುವಕನ ಹಿಂದೆ ಓಡಿ ಹೋದ ಘಟನೆ ಬಿಹಾರದಲ್ಲಿ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

- Advertisement -


ವೀಡಿಯೋದಲ್ಲಿ ನವಡಾದ ಭಗತ್ ಸಿಂಗ್ ಚೌಕ್ ನಲ್ಲಿ ಯುವಕನೊಬ್ಬ ಓಡಿಹೋಗುತ್ತಿದ್ದು, ಈ ವೇಳೆ ಆತನನ್ನು ನೋಡಿದ ವಧು ನನ್ನನ್ನು ಮದುವೆಯಾಗು ಎಂದು ಅವನ ಕೈಯನ್ನು ಹಿಡಿದು ಅಳುತ್ತಾ ಒತ್ತಾಯಿಸುತ್ತಿರುವುದು ಕಂಡುಬಂದಿದೆ.


ವಿಚಲಿತಗೊಂಡ ಆತ ವಧುವಿನಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಲು ಪ್ರಯತ್ನಿಸಿದ್ದಾನೆ. ಆದರೆ ವಧು ಆತನನ್ನು ಹಿಡಿಯಲು ಅವನ ಹಿಂದೆ ಓಡಿದ್ದಾಳೆ. ಕೊನೆಗೆ ಆ ಯುವಕ ವಧುವಿನ ಕೈಯಲ್ಲಿ ಸಿಕ್ಕಿಬಿದಿದ್ದಾನೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.

- Advertisement -



Join Whatsapp