ಕೊಡಗು: ಹಾಶಿಶ್ ಆಯಿಲ್ ಮಾರಾಟ ಜಾಲ ಬಯಲಿಗೆ: ಮೂವರ ಬಂಧನ

Prasthutha|

ಮಡಿಕೇರಿ: ಹಾಶಿಶ್ ಆಯಿಲ್ ಮಾರಾಟದ ಜಾಲವನ್ನು ಬಯಲಿಗೆಳೆದ ಭಾಗಮಂಡಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -

ಭಾಗಮಂಡಲ‌ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ  ಓಡಾಡುತ್ತಿದ್ದ ಕಾರನ್ನು ಪೊಲೀಸರು ತಪಾಸಣೆ ಮಾಡಿದಾಗ ಕಾರಿನ ಢಿಕ್ಕಿಯಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಶಿಶ್ ಆಯಿಲ್ ಪತ್ತೆಯಾಗಿದೆ. ಅಲ್ಲದೆ ಕಾರಿನೊಳಗೆ ವಿವಿಧ ನಂಬರ್ ಪ್ಲೇಟ್ ಗಳು ಪತ್ತೆಯಾಗಿದೆ.

ಕೇರಳ ಮೂಲದ ಅಹ್ಮದ್‌ ಕಬೀರ್ (37), ಅಬ್ದುಲ್ ಖಾದರ್ (27) ಮತ್ತು ಮಹಮ್ಮದ್ ಮುಜಾಬಿಲ್ (22) ಬಂಧಿತರು. ಬಂಧಿತರಿಂದ 10 ಲಕ್ಷ ರೂ ಮೌಲ್ಯದ 1.116 ಗ್ರಾಂ ಹಾಶಿಶ್ ಆಯಿಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -

ಆಂಧ್ರಪ್ರದೇಶದ ಗುಂಟೂರಿನಿಂದ ಮಾದಕ ದ್ರವ್ಯ ತಂದಿದ್ದು, ಆರೋಪಿಗಳ ಪೈಕಿ ಅಹ್ಮದ್ ಕಬೀರ್ ವಾಹನ ಕಳ್ಳತನ, ಸುಲಿಗೆ, ಹನಿಟ್ರ್ಯಾಪ್ ನಲ್ಲಿ ಸಕ್ರಿಯನಾಗಿದ್ದು, ಈತನ ವಿರುದ್ದ ಮಡಿಕೇರಿ ಪೊಲೀಸ್  ಠಾಣೆಯಲ್ಲಿ ವಿವಿಧ ಪ್ರಕರಣಗಳಿವೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ ಮಾಹಿತಿ ನೀಡಿದರು.



Join Whatsapp