ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ದ.ಕ. ಜಿಲ್ಲಾಧ್ಯಕ್ಷರಾಗಿ ಝಾಕೀರ್ ಉಳ್ಳಾಲ್ ಆಯ್ಕೆ

Prasthutha|

►ಪ್ರಧಾನ ಕಾರ್ಯದರ್ಶಿಯಾಗಿ ಇರ್ಫಾನ್ ಕಾನ  

- Advertisement -

ಮಂಗಳೂರು: ಕಾರ್ಮಿಕ ಸಂಘಟನೆಯಾದ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಗಳ ಸಭೆ ಮಂಗಳವಾರ ಮಂಗಳೂರಿನ ಕೋಸ್ಟಲ್ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ಪ್ರತಿನಿಧಿಗಳ ಸಮ್ಮುಖದಲ್ಲಿ 2022 ರಿಂದ 2023 ರ ಸಾಲಿಗೆ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.

- Advertisement -

ಜಿಲ್ಲಾಧ್ಯಕ್ಷರಾಗಿ ಝಾಕೀರ್ ಉಳ್ಳಾಲ್, ಉಪಾಧ್ಯಕ್ಷರಾಗಿ ಖಾದರ್ ಫರಂಗಿಪೇಟೆ, ಪ್ರಧಾನ ಕಾರ್ಯದರ್ಶಿಯಾಗಿ ಇರ್ಫಾನ್ ಕಾನ, ಕಾರ್ಯದರ್ಶಿಯಾಗಿ ಮುಸ್ತಫಾ ಪರ್ಲಿಯಾ, ಶಮೀಮ್ ಬೆಳ್ತಂಗಡಿ, ಕೋಶಾಧಿಕಾರಿಯಾಗಿ ನೌಫಲ್ ಕುದ್ರೋಳಿ ಹಾಗೂ ಸದಸ್ಯರಾಗಿ ಹಾರಿಸ್ ಮುಲ್ಕಿ, ಮುಸ್ತಫಾ ಕಾವಲ್ ಕಟ್ಟೆ, ರಿಯಾಝ್ ಬಲಕ್ಕ, ಸಿದ್ದೀಕ್ ಕಣ್ಣಂಗಾರ್, ಮುಹಮ್ಮದ್ ಫರಂಗಿಪೇಟೆ ರವರನ್ನು ಆಯ್ಕೆ ಮಾಡಲಾಯಿತು

ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು ನಡೆಸಿ ಮಾತನಾಡಿದ ಎಸ್.ಡಿ. ಟಿ.ಯು ರಾಜ್ಯ ಉಪಾಧ್ಯಕ್ಷ ಫಝಲುಲ್ಲಾ,  ಕಾರ್ಮಿಕರ ಹಕ್ಕುಗಳ ಸಂರಕ್ಷಣೆ ಮತ್ತು ಶೋಷಣೆಯ ವಿರುದ್ಧ ಸಂಘಟಿತವಾಗಿ ಹೋರಾಟ ನಡೆಸುವ ವೇದಿಕೆಯಾಗಿದೆ SDTU. ಈ ನಿಟ್ಟಿನಲ್ಲಿ ಕಾರ್ಮಿಕರ ಸಮಸ್ಯೆಗಳಿಗೆ ಸಂಘಟಿತ ಮಧ್ಯೆ ಪ್ರವೇಶ ಮಾಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದರು

SDTU ರಾಷ್ಟ್ರೀಯ ಸಮಿತಿ ಸದಸ್ಯ ಜಾನ್ ಬ್ಯಾಫ್ಟಿಸ್ಟ್ ಡಿಸೋಝ, ಅನ್ವರ್ ಸಾದಾತ್ ಬಜತ್ತೂರು ಕಾರ್ಮಿಕ ಸಂಘಟನೆಯ ಅಗತ್ಯತೆಯ ಬಗ್ಗೆ ವಿವರಿಸಿದರು.

SDTU ರಾಜ್ಯ ಕಾರ್ಯದರ್ಶಿ ಶರೀಫ್ ಪಾಂಡೇಶ್ವರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು



Join Whatsapp