ಮನೆಯಲ್ಲಿ ನಮಾಝ್ ಮಾಡಿದವರ ಮೇಲೆ ಪ್ರಕರಣ ದಾಖಲಿಸಿರುವುದು ಅನ್ಯಾಯ: ಅಸಾದುದ್ದೀನ್ ಉವೈಸಿ ಆಕ್ರೋಶ

Prasthutha|

ಹೈದರಾಬಾದ್: ಮನೆಯೊಂದರಲ್ಲಿ ಸಾಮೂಹಿಕ  ನಮಾಜ್ ಮಾಡಿದ ಆರೋಪದ ಮೇಲೆ 26 ಜನರ ವಿರುದ್ಧ ಪ್ರಕರಣ ದಾಖಲಿಸಿರುವ ಉತ್ತರ ಪ್ರದೇಶ ಪೊಲೀಸರ ಈ ಕ್ರಮವನ್ನು ಎಐಎಂಐಎಂ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಉವೈಸಿ ಖಂಡಿಸಿದ್ದಾರೆ.

- Advertisement -

ಅಸಾದುದ್ದೀನ್ ಉವೈಸಿ, “ಎಲ್ಲಿ ಬೇಕಾದರೂ ‘ನಮಾಜ್’ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮನೆಯಲ್ಲಿ ‘ನಮಾಜ್’ ಮಾಡಲು ಏಕೆ ಆಕ್ಷೇಪಣೆ ಇದೆ? ಇದು ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗಸ್ಟ್ 24 ರಂದು, ಉತ್ತರ ಪ್ರದೇಶದ ಮೊರಾದಾಬಾದ್ ನ  ಛಜ್ಲೆಟ್ ಪಿಎಸ್ ವ್ಯಾಪ್ತಿಯಲ್ಲಿ ನಮಾಜ್ ಮಾಡಲು ಅಪಾರ ಸಂಖ್ಯೆಯ ಜನರು ಸೇರಿದ್ದರು. ಪೊಲೀಸರ ಪ್ರಕಾರ, ಅಲ್ಲಿ ಯಾವುದೇ ಮಸೀದಿ ಇರಲಿಲ್ಲ, ಕೇವಲ ಎರಡು ಮನೆಗಳು ಮಾತ್ರ ಇದ್ದವು. ಇನ್ನು ಮುಂದೆ ಮನೆಯಲ್ಲಿಯೂ ನಮಾಜ್ ಮಾಡಲು ಸಾಧ್ಯವಿಲ್ಲವೇ? ಎಂದು ಉವೈಸಿ ಪ್ರಶ್ನಿಸಿದರು.

- Advertisement -

ನಮಾಝ್ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡಿರುವ ಉವೈಸಿ, ಭಾರತದ ಮುಸ್ಲಿಮರು ಇನ್ನು ಮುಂದೆ ಮನೆಯಲ್ಲಿಯೂ ನಮಾಜ್ ಮಾಡಲು ಸಾಧ್ಯವಿಲ್ಲವೇ? ನಾನು ಈಗ ಪ್ರಾರ್ಥನೆ ಸಲ್ಲಿಸಲು ಸರ್ಕಾರ / ಪೊಲೀಸರಿಂದ ಅನುಮತಿ ಪಡೆಯಬೇಕೇ? @narendramodi ಇದಕ್ಕೆ ಉತ್ತರಿಸಬೇಕು. ಎಷ್ಟರ ವರೆಗೆ ದೇಶದ  ಮುಸ್ಲಿಮರನ್ನು ಎರಡನೇ ದರ್ಜೆಯ ನಗರವಾಸಿಗಳೆಂದು ಪರಿಗಣಿಸಲಾಗುತ್ತದೆ” ಎಂದು ಕೇಳಿದ್ದಾರೆ.



Join Whatsapp