ಒಂಟಾರಿಯೋ/ ಕೆನಡಾ: ಇಲ್ಲಿನ ಮಾರ್ಕಂ ನಗರದ ರಸ್ತೆಯೊಂದಕ್ಕೆ ಇಲ್ಲಿನ ನಗರ ಆಡಳಿತ ಭಾರತದ ಸಂಗೀತ ಲೋಕದ ದಿಗ್ಗಜ, ಆಸ್ಕರ್ ವಿಜೇತ ಎ.ಆರ್ ರೆಹಮಾನ್ ಹೆಸರನ್ನು ಇರಿಸಿದೆ. ಈ ಮೂಲಕ ಕೆನಡಾ ಭಾರತೀಯ ಸಂಗೀತ ಕಲಾವಿದನನ್ನು ಗೌರವಿಸಿದೆ.
ಈ ಕುರಿತಂತೆ ಧನ್ಯವಾದ ಅರ್ಪಿಸಿ ಎ.ಆರ್ ರೆಹಮಾನ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, “ಎ.ಆರ್. ರೆಹಮಾನ್ ಹೆಸರು ನನ್ನದಲ್ಲ, ಇದರರ್ಥ ಕರುಣಾಮಯಿ, ಕರುಣಾಮಯಿ ಎಂಬುದು ನಮ್ಮೆಲ್ಲರ ದೇವನ ಗುಣ ವಿಶೇಷವಾಗಿದೆ. ಆದ್ದರಿಂದ ಆ ಹೆಸರು ಕೆನಡಾದಲ್ಲಿ ವಾಸಿಸುವ ಎಲ್ಲಾ ಜನರಿಗೆ ಶಾಂತಿ, ಸಮೃದ್ಧಿ, ಸಂತೋಷ ಮತ್ತು ಆರೋಗ್ಯವನ್ನು ತರಲಿ. ನಿಮೆಗೆಲ್ಲ ದೇವರ ಕೃಪೆ ಇರಲಿ.” ಎಂದು ಹಾರೈಸಿದ್ದಾರೆ.
ನನ್ನ ಜೀವನದಲ್ಲಿ ನಾನು ಇದನ್ನು ಎಂದಿಗೂ ಊಹಿಸಿರಲಿಲ್ಲ. ಕೆನಡಾದ ಮಾರ್ಕಮ್ ನಗರದ ಮೇಯರ್ (ಫ್ರಾಂಕ್ ಸ್ಕಾರ್ಪಿಟ್ಟಿ) ಮತ್ತು ಕೌನ್ಸಿಲರ್, ಭಾರತೀಯ ಕಾನ್ಸುಲೇಟ್ ಜನರಲ್ (ಅಪೂರ್ವ ಶ್ರೀವಾಸ್ತವ) ಮತ್ತು ಕೆನಡಾದ ಜನರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ರೆಹಮಾನ್ ಹೇಳಿದ್ದಾರೆ.