ಒಂದು ‘ಹಪ್ಪಳ’ಕ್ಕಾಗಿ ರಣರಂಗವಾಯಿತು ಮದುವೆ ಸಭಾಂಗಣ

Prasthutha|

ಆಲಪ್ಪುಝ: ಊಟದ ಮಧ್ಯೆ ಹೆಚ್ಚುವರಿ ಹಪ್ಪಳದ ವಿಚಾರವಾಗಿ ಮದುವೆ ಸಭಾಂಗಣದಲ್ಲಿ ಹೊಡೆದಾಟ ನಡೆದಿದ್ದು, ಸಭಾಂಗಣದ ಮಾಲಕ ಸಹಿತ ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹರಿಪ್ಪಾಡ್‌ನಲ್ಲಿ ನಡೆದಿದೆ.

- Advertisement -

ಹರಿಪ್ಪಾಡ್‌ನ ಸಭಾಂಗಣವೊಂದರಲ್ಲಿ ನಿನ್ನೆ ನಡೆದ ಮದುವೆಯ ಊಟದ ವೇಳೆ ವರನ‌ ಮಿತ್ರರು ಹೆಚ್ಚುವರಿ ಹಪ್ಪಳ ಕೇಳಿದ್ದರು. ಈ ವಿಚಾರವಾಗಿ ವರನ ಸ್ನೇಹಿತರು ಮತ್ತು ಊಟ ಬಡಿಸುವವರ ನಡುವೆ ಮಾರಾಮಾರಿ ನಡೆದಿದ್ದು, ಪರಸ್ಪರ ಕುರ್ಚಿ ಮತ್ತಿತರ ವಸ್ತುಗಳನ್ನು ಎಸೆದು ಹೊಡೆದಾಡಿಕೊಂಡಿದ್ದಾರೆ.

ಘಟನೆ ಕುರಿತಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.



Join Whatsapp