ಮುಂಬೈ: ಬಿಲ್ಕೀಸ್ ಬಾನು ಅತ್ಯಾಚಾರ ಪ್ರಕರಣದ ಆಪರಾಧಿಗಳಿಗೆ ಸನ್ಮಾನ ಮಾಡಿ ಬಿಜೆಪಿ ಅದರ ನೈಜ ಮುಖವನ್ನು ಬಯಲು ಮಾಡಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಾಗ್ಧಾಳಿ ಮಾಡಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾ ಅಂಕಣದಲ್ಲಿ ಉದ್ಧವ್, ಪ್ರಧಾನಿ ಮೋದಿಯವರು ಸ್ತ್ರೀ ಶಕ್ತಿ ಬಗ್ಗೆ ಮಾತಾಡುತ್ತಾರೆ ಆದರೆ ಬಿಜೆಪಿಗರು ಅತ್ಯಾಚಾರಿಗಳಿಗೆ ಆತಿಥ್ಯ ನೀಡುತ್ತಾರೆ ಎಂದು ಹೇಳಿದರು. ಬಿಲ್ಕೀಸ್ ಬಾನು ಮುಸ್ಲಿಂ ಎಂಬ ಮಾತ್ರಕ್ಕೆ ಆಕೆಯ ಮೇಲೆ ನಡೆದ ದೌರ್ಜನ್ಯ ಸರಿಯೇ, ಅತ್ಯಾಚಾರಿಗಳಿಗೆ ಗೌರವ ಕೊಡುವುದು ಹಿಂದೂ ಸಂಸ್ಕ್ರತಿಯೇ, ಯಾಕೆ ಪ್ರಧಾನಿ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬಿಲ್ಕೀಸ್ ಬಾನು ಪ್ರಕರಣವು ಹಿಂದೂ ಮುಸ್ಲಿಂ ಸಮಸ್ಯೆಯಲ್ಲ. ಇದು ಹಿಂದುತ್ವದ ಆತ್ಮ ಮತ್ತು ಹಿಂದೂ ಸಂಸ್ಕ್ರತಿಯ ಪ್ರತಿಷ್ಠೆಯ ವಿಷಯವಾಗಿದೆ. ಆದ್ದರಿಂದ ವೈಯಕ್ತಿಕ ಪ್ರಯೋಜನಗಳಿಗಾಗಿ ಬಿಜೆಪಿ, ನಾಚಿಕೆಯಿಲ್ಲದೆ ಅತ್ಯಾಚಾರಿಯನ್ನು ಬೆಂಬಲಿಸಿದ ರೀತಿ ಅಸಹ್ಯಕರವಾಗಿದೆ. ಇದು ಬಿಜೆಪಿಯ ನಿಜವಾದ ಮುಖವನ್ನು ಬಹಿರಂಗಪಡಿಸಿದೆ ಎಂದು ಉದ್ಧವ್ ಠಾಕ್ರೆ ಟೀಕಿಸಿದರು.