ದುಬೈ: ಪ್ರತಿಷ್ಠಿತ ಏಷ್ಯಾಕಪ್ ಟಿ20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನದ ಬೌಲರ್‌ಗಳ ಎದುರು ತಬ್ಬಿಬ್ಬಾದ ಶ್ರೀಲಂಕಾ, 19. 4 ಓವರ್‌ಗಳಲ್ಲಿ ಕೇವಲ 105 ರನ್‌ಗಳಿಸುವಷ್ಟರಲ್ಲೇ ಆಲೌಟ್ ಆಗಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ, ಲಂಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಆದರೆ ಫಝಲ್ ಫಾರೂಖಿ ಮತ್ತು ನಾಯಕ ನಬಿ ಬೌಲಿಂಗ್ ದಾಳಿಯೆದುರು ಲಂಕಾ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. ಭನುಕಾ ರಾಜಪಕ್ಷ 38ರನ್ ಮತ್ತು ಚಮಿಕಾ ಕರುಣರತ್ನೆ 31 ರನ್‌ಗಳಿಸಿ ತಂಡವನ್ನು 100ರ ಗಡಿ ದಾಟಿಸಿದರು. ತಂಡದ ಏಳು ಮಂದಿ ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಮೊತ್ತವನ್ನೂ ದಾಟಲಿಲ್ಲ. ನಾಯಕ ದಾಸುನ್ ಚನಕ ಸೇರಿದಂತೆ ಮೂವರು ಖಾತೆ ತರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರು.
ಅಫ್ಘಾನಿಸ್ತಾನದ ಪರ ಬೌಲಿಂಗ್ ಆರಂಭಿಸಿದ್ದ ಫಝಲ್ ಫಾರೂಖಿ 3.4 ಓವರ್‌ಗಳ ದಾಳಿಯಲ್ಲಿ ಕೇವಲ 11 ರನ್ ನೀಡಿ ಮೂರು ಪ್ರಮುಖ ವಿಕೆಟ್ ಕಿತ್ತು ಮಿಂಚಿದರು. ಅನುಭವಿ ಸ್ಪಿನ್ನರ್ ಮುಜೀಬ್ ಉರ್ ರಹ್ಮಾನ್ ಮತ್ತು ನಾಯಕ ಮುಹಮ್ಮದ್ ನಬಿ ತಲಾ ಎರಡು ವಿಕೆಟ್ ಪಡೆದರು. ನವೀನ್ ಉಲ್ ಹಕ್ ಒಂದು ವಿಕೆಟ್ ಕಿತ್ತರು. ಪ್ರಮುಖ ಸ್ಪಿನ್ನರ್ ರಶೀದ್ ಖಾನ್ 4 ಓವರ್ ಎಸೆದು ಕೇವಲ 12 ರನ್‌ನೀಡಿದರಾರೂ, ವಿಕೆಟ್ ಪಡೆಯುವಲ್ಲಿ ವಿಫಲರಾದರು.