ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ಕಳೆದು ಹೋದ ಚಿನ್ನದ ಸರ ಹಿಂದಿರುಗಿಸಿದ ಮೀನುಗಾರ ಮಹಿಳೆ !

Prasthutha|

ಮಂಗಳೂರು: ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ಚಿನ್ನದ ಸರ ಕಳೆದುಕೊಂಡ ಮಹಿಳೆಯೊಬ್ಬರಿಗೆ ಮೀನುಗಾರ ಮಹಿಳೆಯರು ಆ ಸರವನ್ನು ಹಿದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

- Advertisement -

ಈ ಘಟನೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ನಡೆದಿದ್ದು, ಮೀನು ಖರೀದಿಸಲು ಬಂದ ಮಹಿಳೆಯ ಸರ ಕಾಣೆಯಾಗಿತ್ತು. ಬಳಿಕ ಮೀನುಗಾರ ಮಹಿಳೆಯೊಬ್ಬರು ಆ ಸರವನ್ನು ಹಿಂದಿರುಗಿಸಿದ್ದಾರೆ.

ಸರವನ್ನು ವಾಪಸ್ ಪಡೆದ ಮಹಿಳೆ ಮುಖದ ಮೇಲಿನ ಸಂಭ್ರಮ ಗಮನಿಸಿದರೆ ಮೀನುಗಾರ ಮಹಿಳೆ ಮಾಡಿರುವ ಉಪಕಾರದ ಮಹತ್ವ ನಮಗೆ ಗೊತ್ತಾಗುತ್ತದೆ.



Join Whatsapp