ಶಿವಮೊಗ್ಗ: ವಿಚಿತ್ರ ಕರುವಿಗೆ ಜನ್ಮ ನೀಡಿದ ಎಮ್ಮೆ

Prasthutha|

ಸೊರಬ: ಎಮ್ಮೆಯೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದ ಘಟನೆ ಪುರಸಭೆ ವ್ಯಾಪ್ತಿಯ ಹಳೇಸೊರಬ ಸಮೀಪದ ಗೌರಿಕೆರೆ ಮಠದಲ್ಲಿ ನಡೆದಿದೆ.

- Advertisement -


ಮಹೇಂದ್ರಸ್ವಾಮಿ ಎಂಬವರಿಗೆ ಸೇರಿದ ಎಮ್ಮೆ ಶನಿವಾರ ಮುಂಜಾನೆ ವಿಚಿತ್ರ ಗಂಡು ಕರುವಿಗೆ ಜನ್ಮ ನೀಡಿದ್ದು, ಕಣ್ಣುಗಳು ಮತ್ತು ಗೊರಸು ಇಲ್ಲದೇ ಬಾಯಿಯ ಮೂಲಕವೇ ಉಸಿರಾಡುತ್ತಿದೆ. ದೇಹ ಸಾಮಾನ್ಯ ಸ್ಥಿತಿಯಲ್ಲಿದ್ದರೂ ಏಳಲು ಸಾಧ್ಯವಾಗದೇ ಒದ್ದಾಡುತ್ತಿದೆ.


ಈ ಮೊದಲು ಇದೇ ಎಮ್ಮೆಗೆ ಜನಿಸಿದ್ದಐದು ಕರುಗಳೂ ಆರೋಗ್ಯವಾಗಿದ್ದವು. ವಿಚಿತ್ರವಾಗಿ ಜನಿಸಿರುವ ಆರನೇ ಕರು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಪಶು ವೈದ್ಯರು ತಿಳಿಸಿದ್ದಾರೆ.



Join Whatsapp