ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು: ಕ್ಲಬ್ ಮಾಲೀಕ ಸೇರಿ ನಾಲ್ವರ ಬಂಧನ

Prasthutha|

ಪಣಜಿ: ನಟಿ ಹಾಗೂ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಶಂಕಾಸ್ಪದ ಸಾವು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವಗೋವಾ ಪೊಲೀಸರು ಕರ್ಲಿ ಕ್ಲಬ್ ಮಾಲೀಕನನ್ನು ಬಂಧಿಸಿದ್ದಾರೆ.

- Advertisement -

ಕರ್ಲಿ ಕ್ಲಬ್ ಮಾಲೀಕನ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದ್ದು ಅವರನ್ನು ತೀವ್ರ ವಿಚಾರಣೆ ನಡೆಸಲಾಗಿದೆ.

ಫೋಗಟ್ ನ ಪಿಎ ಸುಧೀರ್ ಸಾಂಗ್ವಾನ್, ಕರ್ಲಿ ಕ್ಲಬ್ ನ ಮಾಲೀಕ ಸುಖ್ವಿಂದರ್ ಸಿಂಗ್ ಹಾಗೂ ಡ್ರಗ್ ಪೆಡ್ಲರ್ ನನ್ನುಪೊಲೀಸರು ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

- Advertisement -

ಈ ನಡುವೆ ಬಂಧಿಸಿದ ಆರೋಪಿಗಳ ಪೈಕಿ ಒಬ್ಬ ಸೋನಾಲಿ ಪೋಗಟ್ ಅವರಿಗೆ ಡ್ರಗ್ಸ್ ನೀಡಿದ್ದನ್ನು ಒಪ್ಪಿಕೊಂಡಿದ್ದು, ಅಂಜುನಾ ಬೀಚ್ ನಲ್ಲಿ ಸೋನಾಲಿ ಪೋಗಟ್ ಇತರ ಗೆಳೆಯರೊಂದಿಗೆ ಆಟವಾಡುವ ವೇಳೆ ಅವರು ಕುಡಿಯುತ್ತಿದ್ದ ಡ್ರಿಂಕ್ಸ್ ನಲ್ಲಿ ಡ್ರಗ್ಸ್ ಬೆರೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದರ ನಡುವೆ ಕರ್ಲಿ ಕ್ಲಬ್ ಮಾಲೀಕನನ್ನು ಬಂಧಿಸುವ ಮೊದಲು, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಕುಟುಂಬದ ಆರೋಪದ ನಂತರ ಪೊಲೀಸರು ಸುಧೀರ್ ಮತ್ತು ಸುಖ್ವಿಂದರ್ ಅವರನ್ನು ಬಂಧಿಸಿದ್ದರು.

ಆರೋಪಿಗಳಾದ ಸುಧೀರ್ ಸಾಂಗ್ವಾನ್ ಹಾಗೂ ಸುಖ್ವಿಂದರ್ ವಾಸಿ ಅವರು ಕಳೆದ ಆ. 22 ರಂದು ಫೋಗಟ್ ಅವರೊಂದಿಗೆ ಗೋವಾಗೆ ತೆರಳಿದ್ದರು. ವಾಸ್ತವವಾಗಿ, ಮರಣೋತ್ತರ ಪರೀಕ್ಷೆಯ ವರದಿಯು ಸೋನಾಲಿಯ ದೇಹದಲ್ಲಿ ಹಲವಾರು ಗಾಯದ ಗುರುತುಗಳಿವೆ ಎಂದೂ ಬಹಿರಂಗ ಮಾಡಿದೆ.

ಸಾಕಷ್ಟು ಅನುಮಾನ:

ಅದೇ ಸಮಯದಲ್ಲಿ, ಗೋವಾ ಪೊಲೀಸರು ಸಿಸಿಟಿವಿ ಫೂಟೇಜ್ ಅನ್ನು ವಶಪಡಿಸಿಕೊಂಡಿದ್ದಾರೆ, ಅದರಲ್ಲಿ ಸುಧೀರ್, ಸೋನಾಲಿಗೆ ಬಾಟಲಿಯಿಂದ ಏನೋ ನೀಡುತ್ತಿರುವುದು ಕಂಡುಬಂದಿದೆ, ಆದರೆ ಟಿಕ್ ಟಾಕ್ ತಾರೆ ಪದೇ ಪದೇ ಆತನನ್ನು ತಡೆಯುತ್ತಿದ್ದರು. ಬಾಟಲಿಯಲ್ಲಿರುವುದನ್ನು ಕುಡಿಯಲು ಸೋನಾಲಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಇದೀಗ ಇದು ಸೋನಾಲಿಗೆ ನೀಡುತ್ತಿರುವ ಎಂಡಿಎಂಎ ಡ್ರಗ್ ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನು ಖಚಿತಪಡಿಸಲು ರಾಸಾಯನಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ಕಳೆದ ಆಗಸ್ಟ್ 23 ರಂದು 42 ವರ್ಷದ ಸೋನಾಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಗೋವಾ ಪೊಲೀಸರು ತಿಳಿಸಿದ್ದರು. ಆದರೆ, ಸೋನಾಲಿ ಫೋಗಟ್ ಅವರ ಸಹೋದರಿ ಆಕೆಯ ಸಾವನ್ನು ಪಿತೂರಿ ಎಂದು ಹೇಳಿದ್ದಾರೆ.

ಪೋಗಟ್ ಅವರ ಸಹೋದರ ರಿಂಕು ಢಾಕಾ, ಸೋನಾಲಿ ಅವರ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಲಾಗಿದೆ. ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ ಇದೆ ಎಂದು ದೂರು ನೀಡಿದ್ದರು. ಆದರೆ, ಮರಣೋತ್ತರ ವರದಿಯಲ್ಲಿ ಇಂಥ ಯಾವುದೇ ಘಟನೆಯಾಗಿರುವ ಬಗ್ಗೆ ಸಾಕ್ಷಿ ಇಲ್ಲ ಎಂದು ಐಜಿಪಿ ಓಮ್ವೀರ್ ಸಿಂಗ್ ಬಿಷ್ಣೋಯಿ  ಹೇಳಿದ್ದಾರೆ.

ಇದೇ ವೇಳೆ ಹೃದಯಾಘಾತದಿಂದ ಸೋನಾಲಿ ಪೋಗಟ್ ಸಾವು ಕಂಡಿರುವ ಸಾಧ್ಯತೆಯನ್ನೂ ಪೊಲೀಸರು ತಳ್ಳಿ ಹಾಕಿದ್ದಾರೆ. ಹೃದಯಾಘಾತದಿಂದ ಸಾವಾಗಿರುವ ಸಾಧ್ಯತೆ ಕಡಿಮೆ. ಪೋಗಟ್ ಅವರಿಗೆ ಸಿಂಥೆಟಿಕ್ ಡ್ರಗ್ ಅನ್ನು ನೀಡಲಾಗಿದೆ.ಬಹುಶಃ ಇದರಿಂದಲೇ ಅವರು ಸಾವು ಕಂಡಿರಬಹುದು ಎಂದಿದ್ದಾರೆ.

ಸಿಸಿಟಿವಿ ದೃಶ್ಯವಾವಳಿಗಳನ್ನು ನೋಡಿದರೆ, ಸುಧೀರ್ ಸಂಗ್ವಾನ್ ಹಾಗೂ ಸುಖ್ವಿಂದರ್, ಸೋನಾಲಿ ಪೋಗಟ್ ಅವರ ಜೊತೆಗೂಡಿ ಪಾರ್ಟಿ ಮಾಡಿರುವುದು ಕಂಡು ಬಂದಿದೆ. ಈ ದೃಶ್ಯದಲ್ಲಿಯೇ ಒಬ್ಬ ವ್ಯಕ್ತಿಯೊಬ್ಬ ಆಕೆಗೆ ಒತ್ತಾಯಪೂರ್ವಕವಾಗಿ ಡ್ರಗ್ಸ್ ನೀಡಿರುವುದು ಕಂಡು ಬಂದಿದ್ದು ಆತ ಪ್ರಶ್ನಿಸಿದಾಗ ಆತ ಅದನ್ನು ಒಪ್ಪಿಕೊಂಡಿದ್ದಾನೆ’ ಎಂದು ಹೇಳಿದ್ದಾರೆ.

ಕ್ಲಬ್ ನ ಬಾಥ್ರೂಮ್ ನಿಂದ ಪೊಲೀಸರು ಡ್ರಗ್ಸ್ ವಶಪಡಿಸಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.



Join Whatsapp