ಮಾಸ್ಕೋ: ಕೀವ್ ನ್ಯಾಟೋಗೆ ಸೇರುವ ತನ್ನ ಆಕಾಂಕ್ಷೆಗಳನ್ನು ಔಪಚಾರಿಕವಾಗಿ ತ್ಯಜಿಸಿದರೂ ಮಾಸ್ಕೋ ಉಕ್ರೇನ್‌ನಲ್ಲಿ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್‌ವೆಡೇವ್ ತಿಳಿಸಿದ್ದಾರೆ.
ಕೆಲವು ಷರತ್ತುಗಳಿಗೆ ಒಳಪಟ್ಟು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲು ರಷ್ಯಾ ಸಿದ್ಧವಾಗಿತ್ತು ಎಂದು ಪ್ರಸ್ತುತ ರಷ್ಯಾ ಭದ್ರತಾ ಮಂಡಳಿಯ ಡೆಪ್ಯುಟಿ ಚಯರ್‌ಮ್ಯಾನ್ ಆಗಿರುವ ಡಿಮಿಟ್ರಿ ಮೆಡ್‌ವೆಡೇವ್ ಹೇಳಿದ್ದಾರೆ.
ಉಕ್ರೇನ್‌ನ ನ್ಯಾಟೋ ಸದಸ್ಯತ್ವವನ್ನು ಮಾಸ್ಕೊ ಯುದ್ದಕ್ಕೆ ಮೊದಲೇ ಒಪ್ಪಿಕೊಂಡಿರಲಿಲ್ಲ ಎಂದು ತಿಳಿಸಿದ ಅವರು, ರಷ್ಯಾ, ತನ್ನ ಗುರಿಗಳನ್ನು ಸಾಧಿಸುವವರೆಗೆ ಕಾರ್ಯಾಚರಣೆ ಮುಂದುವರಿಸಲಿದೆ ಎಂದು ಹೇಳಿದರು.