ಉಕ್ರೇನ್ ಗೆ 3 ಬಿಲಿಯನ್ ಡಾಲರ್ ಮಿಲಿಟರಿ ಸಹಾಯ ಘೋಷಿಸಿದ ಜೋ ಬೈಡನ್

Prasthutha|

- Advertisement -

ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ಗೆ ಸುಮಾರು 3 ಬಿಲಿಯನ್ ಡಾಲರ್ ಹೊಸ ಮಿಲಿಟರಿ ಸಹಾಯವನ್ನು ಘೋಷಿಸಿದ್ದು, ರಷ್ಯಾ – ಉಕ್ರೇನ್ ಯುದ್ಧವು ಏಳನೇ ತಿಂಗಳಿಗೆ ಪ್ರವೇಶಿಸಿದ ಹಿನ್ನೆಲೆಯಲ್ಲಿ, ರಷ್ಯಾ ಆಕ್ರಮಣ ತಡೆಯಲು ಇದು ದೀರ್ಘಕಾಲದಲ್ಲಿ ಉಕ್ರೇನ್ ಸಹಕಾರಿಯಾಗಲಿದೆ ಎಂದು ಬೈಡನ್ ಅಭಿಪ್ರಾಯಪಟ್ಟಿದ್ದಾರೆ.

ಈ ಹಣಕಾಸು ನೆರವು ಯುದ್ಧಪೀಡಿತ ಕೀವ್‌ಗೆ ವಾಯು ರಕ್ಷಣಾ ವ್ಯವಸ್ಥೆಗಳು, ಫಿರಂಗಿ ವ್ಯವಸ್ಥೆಗಳು ಮತ್ತು ಯುದ್ಧಸಾಮಗ್ರಿಗಳು, ಕೌಂಟರ್-ಮಾನವರಹಿತ ವೈಮಾನಿಕ ವ್ಯವಸ್ಥೆಗಳು ಮತ್ತು ರಾಡಾರ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಬೈಡನ್ ಹೇಳಿದರು.

- Advertisement -

ರಷ್ಯಾವು ಉಕ್ರೇನ್ ವಿರುದ್ಧ ಆರಂಭಿಸಿದ ಮಿಲಿಟರಿ ದಾಳಿಯ ಬಳಿಕ ಯುನೈಟಡ್ ಸ್ಟೇಟ್‌ನಿಂದ ದೊರೆತ ಅತಿದೊಡ್ಡ ಹಣಕಾಸು ನೆರವು ಆಗಿದೆ.

“ಈ ಸ್ವಾತಂತ್ರ್ಯ ದಿನವು ಅನೇಕ ಉಕ್ರೇನಿಯನ್ನರಿಗೆ ಕಹಿ ಸಿಹಿಯಾಗಿದೆ ಎಂದು ನನಗೆ ತಿಳಿದಿದೆ. ಏಕೆಂದರೆ ಸಾವಿರಾರು ಜನರು ಕೊಲ್ಲಲ್ಪಟ್ಟರು ಅಥವಾ ಗಾಯಗೊಂಡಿದ್ದಾರೆ, ಲಕ್ಷಾಂತರ ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ ಮತ್ತು ಇನ್ನೂ ಅನೇಕರು ರಷ್ಯಾದ ದೌರ್ಜನ್ಯಗಳು ಮತ್ತು ದಾಳಿಗಳಿಗೆ ಬಲಿಯಾಗಿದ್ದಾರೆ” ಎಂದು ಬೈಡೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp