ಕೊಡಗು: ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಸಂಪತ್ RSS ಕಾರ್ಯಕರ್ತ ಹೌದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಒಪ್ಪಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪತ್ ಆರ್ ಎಸ್ ಎಸ್ ಕಾರ್ಯಕರ್ತನೂ ಆಗಿರಬಹುದು. ಸಂಘದ ಕಾರ್ಯಕರ್ತನಾಗಿದ್ದು ಗಣವೇಶ ಧರಿಸಿ ಬೈಟಕ್ ನಲ್ಲೂ ಭಾಗವಹಿಸಿರಬಹುದು. ಆದರೆ ಆತ ಬಿಜೆಪಿ ಕಾರ್ಯಕರ್ತನಲ್ಲ ಎಂದು ಹೇಳಿದರು.
ಅಲ್ಲದೇ, ಆರ್ ಎಸ್ ಎಸ್ ಕಾರ್ಯಕರ್ತನಾದವನು ಬಿಜೆಪಿಯಲ್ಲೇ ಇರಬೇಕು ಎಂದೇನಿಲ್ಲ. ಯಾವ ಪಕ್ಷದಲ್ಲಾದರೂ ಇರಬಹುದು ಎಂದು ಹೇಳಿದ್ದಾರೆ.