ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ 45,83,160 ರೂಪಾಯಿ ಮೌಲ್ಯದ 24 ಕ್ಯಾರೆಟ್ ಶುದ್ಧತೆಯ 878.000 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಸ್ಪೈಸ್ ಜೆಟ್ ವಿಮಾನ ಎಸ್ ಜಿ-60 ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎಂಐಎ) ಬಂದಿಳಿದಿ ಬಂಟ್ವಾಳ ಮೂಲದ ಪ್ರಯಾಣಿಕನಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಅಂಡಾಕಾರದ ಮಾತ್ರೆಯ ರೂಪದಲ್ಲಿದ್ದ ವಸ್ತುವಿನಿಂದ ಚಿನ್ನವನ್ನು ಹೊರತೆಗೆಯಲಾಗಿದ್ದು, ಅದನ್ನು ಚಿನ್ನದ ಹುಡಿಯ ರೂಪದಲ್ಲಿ ಇರಿಸಿ ಲೋಹದೊಂದಿದೆ ಮರೆಮಾಚಿ, ಪ್ರಯಾಣಿಕನ ದೇಹದಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.