ಜನರ ಬಗ್ಗೆ ಗಮನವಿಲ್ಲದ ಎರಡು ರಾಜಕೀಯ ಪಕ್ಷಗಳು: ಎಚ್.ಡಿ‌. ಕುಮಾರಸ್ವಾಮಿ

Prasthutha|

ಹಾಸನ: ನೆರೆ ಹಾವಳಿಯಿಂದ ತತ್ತರಿಸಿ ಹೋದ ಜನರ ಬಗ್ಗೆ ಗಮನವಿಲ್ಲದ ಎರಡೂ ರಾಜಕೀಯ ಪಕ್ಷಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ‌ ನಾಯಕ ಎಚ್.ಡಿ‌. ಕುಮಾರಸ್ವಾಮಿ ಟೀಕಿಸಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತ‌ನಾಡಿದ ಅವರು, 2019ರಲ್ಲಿ ನೆರೆ ಹಾವಳಿಗೆ ತುತ್ತಾಗಿ ಮೂರು ವರ್ಷಗಳಿಂದ ಶೆಡ್ ನಲ್ಲಿರುವವರಿಗೆ ಇಂದಿಗೂ ಮನೆ ಒದಗಿಸಿಲ್ಲ.ಇಂತಹ ಪರಿಸ್ಥಿತಿಯಲ್ಲಿರುವ ಜನರ ಸಂಕಷ್ಟಕ್ಕೆ ಪರಿಹಾರ ಒದಗಿಸದ ಎರಡು ರಾಷ್ಟ್ರೀಯ ಪಕ್ಷಗಳು ಕೇವಲ ಮೊಟ್ಟೆ ಎಸೆದರೆಂದು ಪಾದಯಾತ್ರೆ, ಅದಕ್ಕೆ ವಿರೋಧವಾಗಿ ಮತ್ತೊಂದು ಪಾದಯಾತ್ರೆ ನಾಟಕ ಮಾಡುತ್ತಿವೆ ಎಂದು ಹೇಳಿದರು.


ರಾಜ್ಯದಲ್ಲಿ ನೂರಾರು ಸಮಸ್ಯೆಗಳಿದ್ದರೂ ರೈತ ಪರ ಯೋಚಿಸಬೇಕಾದ ಸರ್ಕಾರ, ಕೇವಲ ವಿರೋಧ ಪಕ್ಷದ ನಾಯಕರ ಬಗ್ಗೆ ಮಾತನಾಡುವ ಮೂಲಕ ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿರುವುದನ್ನು ಜನ ನೋಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

- Advertisement -


ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯನ್ನು ಜನ ನೋಡಿದ್ದಾರೆ. ಜಾಹಿರಾತುಗಳ ಮೂಲಕ ಹೋರಾಟಗಾರರನ್ನು ಅವಹೇಳನ ಮಾಡಿರುವುದನ್ನು ಕಂಡಿದ್ದೇವೆ. ಎಲ್ಲ ಬೆಳವಣಿಗೆಗಳು ಸಂಘರ್ಷಕ್ಕೆ ಕಾರಣವಾಗಿವೆ ಎಂದು ತಿಳಿಸಿದರು.



Join Whatsapp