59 ವರ್ಷದ ತಾಯಿಗೆ ವರಾನ್ವೇಷಣೆ ನಡೆಸಿ, ಮದುವೆ ನೆರವೇರಿಸಿದ ಮಗಳು !

Prasthutha|

ತ್ರಿಶೂರ್: ಗಂಡನ‌ ಸಾವಿನ‌ ಬಳಿಕ ಒಬ್ಬಂಟಿಯಾಗಿದ್ದ ಮಹಿಳೆಗೆ ಸ್ವತಃ ಮಗಳೇ ವರಾನ್ವೇಷಣೆ ನಡೆಸಿ ಮದುವೆ ಮಾಡಿಕೊಟ್ಟ ಘಟನೆ ಜಿಲ್ಲೆಯ ಕೋಲಯಿಯಲ್ಲಿ ನಡೆದಿದೆ.

- Advertisement -

ಗಂಡನ ಸಾವಿನ ಬಳಿಕ ರತಿ ಮೆನೋನ್ ಒಬ್ಬಂಟಿಯಾಗಿದ್ದಳು. ಮಗಳು ಮದುವೆಯಾಗಿ ಬೇರೆಡೆ ಸಂಸಾರ ನಡೆಸುತ್ತಿದ್ದಳು.

ಇತ್ತೀಚೆಗೆ ತನ್ನ ತಾಯಿ 58ನೆ ಹುಟ್ಟುಹಬ್ಬ ಆಚರಿಸುವ ವೇಳೆ, ತಾಯಿಯ ಏಕಾಂತದ ಬಗ್ಗೆ ಮಗಳು ಚಿಂತಿಸಿದ್ದಳು. 58ನೇ ವರ್ಷದಲ್ಲೇ ತಾಯಿ ವಿಧವೆಯಾಗಿ ಜೀವಿಸುವುದು ನನಗೆ ಅರಗಿಸಿಕೊಳ್ಳಲಾಗಲಿಲ್ಲ. ತಾಯಿಗೆ ಒಬ್ಬ ಸಂಗಾತಿಯ ಅಗತ್ಯ ಇದೆ ನನಗನಿಸಿತ್ತು ಎಂದು ಮಗಳು ಪ್ರಸೀತಾ ಹೇಳಿದ್ದಾರೆ.

- Advertisement -

ಈ ನಿಟ್ಟಿನಲ್ಲಿ ಕೃಷಿ ವಿಶ್ವ ವಿದ್ಯಾಲಯದ ನಿವೃತ್ತ ಉದ್ಯೋಗಿ ಮನ್ನುರ್ತಿ ಪಟ್ಟಿಕ್ಕಾಡ್ ನಿವಾಸಿ ದಿವಾಕರ್ ಜೊತೆ ತನ್ನ ತಾಯಿಯ ಮದುವೆಯನ್ನು ಸ್ವತಃ ಮಗಳೇ ತಿರುವಂಬಾಡಿ ದೇವಸ್ಥಾನದಲ್ಲಿ ನೆರವೇರಿಸಿಕೊಟ್ಟಿದ್ದಾಳೆ.



Join Whatsapp