ಧರ್ಮಗುರುಗಳ ಮೇಲೆ ಸಂಘಪರಿವಾರ ಗೂಂಡಾಗಿರಿ; ಕಠಿಣ ಕ್ರಮ ಕೈಗೊಳ್ಳಲು SKSSF ಕೊಡಗು ಜಿಲ್ಲಾ ಸಮಿತಿ ಆಗ್ರಹ

Prasthutha|

ಮಡಿಕೇರಿ: ಕುಟುಂಬದೊಂದಿಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಧರ್ಮಗುರುಗಳನ್ನು ಹಿಂಬಾಲಿಸಿ ಹಲ್ಲೆ ನಡೆಸಿ, ಜೊತೆಗಿದ್ದ ಪತ್ನಿ ಹಾಗೂ ಮಕ್ಕಳ ಮೇಲೆ ಹಲ್ಲೆಗೆ ಮುಂದಾಗಿರುವ ಸಂಘಪರಿವಾರದ ಗೂಂಡಾಗಿರಿಯನ್ನು SKSSF ಕೊಡಗು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.

- Advertisement -

ಜಿಲ್ಲೆಯಲ್ಲಿ ಸ್ವತಂತ್ರವಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಖೇದಕರ. ಕಾನೂನು ಪಾಲಕರು ಇಂತಹಾ  ಕೃತ್ಯಗಳೆಸಗುವವರನ್ನು ಮಟ್ಟಹಾಕುವ ಕೆಲಸ ಮಾಡಲೇಬೇಕಾಗಿದೆ. ಬಿಳಿ ವಸ್ತ್ರ ಹಾಗೂ ಮುಂಡಾಸು ಕಾಣುವಾಗ ಒಳಗಿನ ಕೋಮುದ್ವೇಷ ಹೊರಹಾಕುವವರನ್ನು ಹಾಗೂ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾಣದ ಪ್ರಭಾವಿ ಕೈಗಳನ್ನು ಕೂಡಲೇ ಬಂಧಿಸಬೇಕಾಗಿದೆ.

ಹಲ್ಲೆ ಮಾಡಿದ ಆರೋಪಿಗಳನ್ನು ಈಗಾಗಲೇ ಪೋಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಕೋಮು ಘರ್ಷಣೆ ಸೃಷ್ಟಿಸಲು ಸಂಘಪರಿವಾರ ಸಂಘಟನೆಗಳು ನಿರಂತರ ಷಡ್ಯಂತ್ರ ರೂಪಿಸುತ್ತಿದೆ. ಆದ್ದರಿಂದ ಇಂತಹಾ ಅಹಿತಕರ ಘಟನೆಗಳು ಮರುಕಳಿಸದ ರೀತಿಯಲ್ಲಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು SKSSF ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಖ್ ದಾರಿಮಿ ಮಡಿಕೇರಿ ಹಾಗೂ ಪ್ರಧಾನ ಕಾರ್ಯದರ್ಶಿ ಜಂಶೀರ್ ವಾಫಿ ಗೋಣಿಕೊಪ್ಪ ಆಗ್ರಹಿಸಿದ್ದಾರೆ.



Join Whatsapp