ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದ ಮಾಸ್ಟರ್ ಮೈಂಡ್ ಅಲೆಕ್ಸಾಂಡರ್ ಡುಗಿನ್ ನ ಪುತ್ರಿ ದರ್ಯಾ ಡುಗಿನ್ ಅವರು ಕಾರು ಸ್ಪೋಟದಲ್ಲಿ ಸಾವನ್ನಪ್ಪಿದ ಘಟನೆ ಮಾಸ್ಕೋದ ಹೊರವಲಯದ ಬೊಲ್ಶಿಯೆ ವ್ಯಾಜ್ಯೋಮಿ ಎಂಬ ಗ್ರಾಮದ ಹೆದ್ದಾರಿಯಲ್ಲಿ ನಡೆದಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರ ‘ಮೆದುಳು’ ಎಂದೇ ಕರೆಯಲ್ಪಡುವ 60 ವರ್ಷದ ಅಲೆಕ್ಸಾಂಡರ್ ಡುಗಿನ್ ಅವರನ್ನು ಗುರಿಯಾಗಿಸಿ ಈ ಸ್ಪೋಟ ನಡೆಸಲಾಗಿತ್ತು. ಬಾಂಬ್ ಸ್ಪೋಟದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ದರ್ಯಾ ಡುಗಿನ್ ಅವರ ಲ್ಯಾಂಡ್ ಕ್ರೂಸರ್ ಪ್ರಾಡೊ ಬೆಂಕಿಯಲ್ಲಿ ದಹನವಾಗುತ್ತಿರುವುದು ಕಾಣಬಹುದಾಗಿದೆ.
ಅಲೆಕ್ಸಾಂಡರ್ ಡುಗಿನ್ ಕೂಡಾ ಅದೇ ಕಾರಿನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆತ ಬೇರೆ ಕಾರಿನಲ್ಲಿ ಹೊರಟಿದ್ದ. ಉಕ್ರೇನ್ ನ ಭಯೋತ್ಪಾದಕರು ಈ ಕೃತ್ಯ ನಡೆಸಿದ್ದಾರೆಂದು ರಷ್ಯಾ ಹೇಳಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.