ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುವ ವೇಳೆ ಇಣುಕಿ ನೋಡಿದ ಶಿಕ್ಷಕ

Prasthutha|

RSS ಪ್ರಚಾರಕನ ವಿರುದ್ಧ ಪೊಕ್ಸೊ ಪ್ರಕರಣ ದಾಖಲು

- Advertisement -

ಇಡುಕ್ಕಿ: ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಅಧ್ಯಾಪಕನೋರ್ವ ಇಣುಕಿ ನೋಡಿದ ಘಟನೆ ಎನ್‍ಎಸ್‍ಎಸ್ ಶಿಬಿರದಲ್ಲಿ ನಡೆದಿದ್ದು, ಅಧ್ಯಾಪಕನ ವಿರುದ್ಧ ಪೊಕ್ಸೊ ಅಡಿ ಪ್ರಕರಣ ದಾಖಲಾಗಿದೆ.

ಇಲ್ಲಿನ ಕಞಿಕುಯಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರಲ್ಲಿ 10 ದಿನಗಳ ಎನ್‍ಎಸ್‍ಎಸ್ ಶಿಬಿರ ನಡೆಯುತ್ತಿದ್ದು, ಶಿಬಿರದ ಉಸ್ತುವರಿ ಹೊತ್ತ ಅಧ್ಯಾಪಕರ ಪೈಕಿ ಓರ್ವರಾದ ಹರಿ ಆರ್ ವಿಶ್ವನಾಥ್, ವಿದ್ಯಾರ್ಥಿನಿಯರು ಬಟ್ಟೆ ಬದಲಾಸುವ ಕೊಠಡಿಗೆ ಇಣುಕಿ ನೋಡಿದ್ದು, ಇದನ್ನು ಇತರ ವಿದ್ಯಾರ್ಥಿನಿಯರು ಪ್ರಶ್ನಿಸಿದ ವೇಳೆ ಅವರ ಜೊತೆ ಅಶ್ಲೀಲವಾಗಿ ಮಾತನಾಡಿದ್ದ.

- Advertisement -


ಹರಿ ಆರ್ ವಿಶ್ವನಾಥ್ ಬಿಜೆಪಿ ಬೆಂಬಲಿತ ಅಧ್ಯಾಪಕರ ಸಂಘದ ಜಿಲ್ಲಾ ಅಧ್ಯಕ್ಷ ಎಂದು ತಿಳಿದು ಬಂದಿದ್ದು, ಈ ಹಿಂದೆ ಆರೆಸ್ಸೆಸ್ ಪ್ರಚಾರಕನಾಗಿ ಕಾರ್ಯನಿರ್ವಹಿಸಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೆ ಶಿಬಿರದಲ್ಲಿದ್ದ ಮತ್ತೋರ್ವ ವಿದ್ಯಾರ್ಥಿಗೆ ಕರೆ ಮಾಡಿದ್ದ ಅಧ್ಯಾಪಕ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸುವಂತೆ ಭಿನ್ನವಿಸಿಕೊಂಡಿದ್ದಾರೆ.

ಈ ಅಧ್ಯಾಪಕ ಈ ಹಿಂದೆಯೂ ಇದೇ ರೀತಿ ವರ್ತಿಸಿದ್ದು, ಇದು ಅವರ ನಿರಂತರ ಚಾಳಿಯಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಮೊದಲು ವಿದ್ಯಾರ್ಥಿನಿ ದೂರು ನೀಡಲು ಹಿಂದೇಟು ಹಾಕಿದರೂ, ಮತ್ತೆ ಕಾಲೇಜು ಆಡಳಿತ ಮಂಡಳಿಯ ನೆರವಿನೊಂದಿಗೆ ದೂರನ್ನು ನೀಡಿದ್ದಾಳೆ. ಸದ್ಯ ಅಧ್ಯಾಪಕ ನಾಪತ್ತೆಯಾಗಿದ್ದಾನೆ.



Join Whatsapp