10 ವಾರೆಂಟ್ ಜಾರಿಯಾಗಿದ್ದ ಕುಖ್ಯಾತ ಮನೆಗಳ್ಳನ ಬಂಧನ: 37 ಲಕ್ಷದ ಸೊತ್ತು ವಶ

Prasthutha|

ಬೆಂಗಳೂರು: ನಕಲಿ ಕೀ ಬಳಸಿ ಶ್ರೀಮಂತರ ಮನೆಗಳಿಗೆ ನುಗ್ಗಿ ನಗದು  ಚಿನ್ನಾಭರಣಗಳನ್ನು ದೋಚಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸಿ‌ ಭರ್ಜರಿ ಬೇಟೆಯಾಡಿರುವ ಎಚ್‍ ಎಸ್‍ ಆರ್ ಲೇಔಟ್  ಪೊಲೀಸರು 37 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -

ಪ್ರಕಾಶ ‌ಬಂಧಿತ ಕುಖ್ಯಾತ ಮನೆಗಳ್ಳನಾಗಿದ್ದು ಆತನಿಂದ 37 ಲಕ್ಷ ರೂ. ಬೆಲೆಯ 700 ಗ್ರಾಂ ತೂಕದ ಚಿನ್ನಾಭರಣ, 2 ಕೆಜಿ ಬೆಳ್ಳಿ ಸಾಮಾಗ್ರಿಗಳು ಹಾಗೂ ಹೆಸರಾಂತ ಕಂಪನಿಯ ವಾಚುಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ನಕಲಿ ಕೀಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.

ಎಚ್‍ ಎಸ್‍ ಆರ್ ಲೇಔಟ್‍ ನ ಶ್ರೀಮಂತರ ಮನೆಗಳನ್ನು ಗುರಿಯಾಗಿಸಿಕೊಂಡು ನಕಲಿ ಕೀ ಬಳಸಿ ಕಳ್ಳತನ ಮಾಡಲಾಗಿತ್ತು. ಎಚ್‍ ಎಸ್‍ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವೂ ಸೇರಿದಂತೆ ಒಟ್ಟು  ನಾಲ್ಕು ಕನ್ನಗಳವು ಪ್ರಕರಣಗಳು ನಕಲಿ ಕೀ ಬಳಸಿ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿ

- Advertisement -

ಚಾಲಾಕಿಯ ಪತ್ತೆಗಾಗಿ ಇನ್ಸ್ ಪೆಕ್ಟರ್ ಅವರ ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗಿತ್ತು.

ಈ ತಂಡ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನ ಜಾಡು ಹಿಡಿದು  ಕ್ಷಿಪ್ರ ಕಾರ್ಯಾಚರಣೆ  ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ  ತಲೆಮರೆಸಿಕೊಂಡಿರುವ ಆರೋಪಿಯ ಸಹಚರನ ಪತ್ತೆಗಾಗಿ ತನಿಖೆ ಮುಂದುವರೆಸಲಾಗಿದೆ.ಆರೋಪಿ ವಿರುದ್ಧ  ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ  10ಕ್ಕೂ ಹೆಚ್ಚು ಬಂಧನದ ವಾರೆಂಟ್‍ ಗಳಿವೆ. ಆರೋಪಿಯ ಬಂಧನದಿಂದ ಎಚ್‍ ಎಸ್‍ ಆರ್ ಲೇಔಟ್ ಠಾಣೆಯ  4 ಕನ್ನಗಳವು ಪ್ರಕರಣ, ಬಂಡೆಪಾಳ್ಯ ಪೊಲೀಸ್ ಠಾಣೆಯ 2 ಕನ್ನಗಳವು ಪ್ರಕರಣ, ವಿವೇಕನಗರ ಪೊಲೀಸ್ ಠಾಣೆಯ ಒಂದು ಕನ್ನಗಳವು ಪ್ರಕರಣ, ಇಂದಿರಾನಗರ, ಬನಶಂಕರಿ, ಮೈಕೋಲೇಔಟ್ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 10 ಕನ್ನಗಳವು ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಎಚ್‍ ಎಸ್‍ ಆರ್ ಲೇಔಟ್  ಇನ್‍ ಸ್ಪೆಕ್ಟರ್ ರವಿ ಅವರನ್ನೊಳಗೊಂಡ  ಸಿಬ್ಬಂದಿ ಯಶಸ್ವಿಯಾಗಿದೆ.



Join Whatsapp