ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ ಶ್ಯಾಮವರ್ ರಾಯ್ ಗೆ ಬಾಂಬೆ ಹೈಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ.
ಶ್ಯಾಮವರ್ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಕಾರು ಚಾಲಕರಾಗಿದ್ದನು. ಆತನನ್ನು 2015ರಲ್ಲಿ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
ಆ ಸಮಯದಲ್ಲಿ ಹತ್ಯೆಯ ರಹಸ್ಯವನ್ನು ಮುಂಬೈ ಪೊಲೀಸರ ಎದುರು ಶ್ಯಾಮವರ್ ಬಹಿರಂಗ ಪಡಿಸಿದ್ದರಿಂದ ಆತನೊಂದಿಗೆ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ, ಅವರ ಪತಿ ಸಂಜೀವ್ ಖನ್ನಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.
ಪೀಟರ್ ಮುಖರ್ಜಿ ಸೇರಿದಂತೆ ಪ್ರಕರಣದ ಇತರ ಎಲ್ಲಾ ಆರೋಪಿಗಳು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.