ಇದು ಮಾತ್ರೆಯಲ್ಲ, ಮದುವೆ ಆಮಂತ್ರಣ ಪತ್ರಿಕೆ…!

Prasthutha|

ಈ ಮಾತ್ರೆ ಕಾರ್ಡ್ ನಲ್ಲಿ ಏನಿದೆ ಗೊತ್ತಾ?

- Advertisement -

ಬೆಂಗಳೂರು: ಪಾಸ್ ಪೋರ್ಟ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ದಿನಪತ್ರಿಕೆ ಹೀಗೆ ಹಲವು ತರಹದ ಆಮಂತ್ರಣ ಪತ್ರಿಕೆಗಳು ಚಾಲ್ತಿಯಲ್ಲಿವೆ. ಇದೀಗ ತಮಿಳನಾಡಿನಲ್ಲಿ ಟ್ಯಾಬ್ಲೆಟ್(ಮಾತ್ರೆ) ಪ್ಯಾಕೆಟ್ ಮಾದರಿಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಈ ವಿಭಿನ್ನ ಶೈಲಿಯ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಮುದ್ರಣವಾಗಿದೆ. ವರ ಫಾರ್ಮಾಸಿಸ್ಟ್, ವಧು ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಜೋಡಿ ಆಹ್ವಾನ ಪತ್ರಿಕೆಗೆ ಟ್ಯಾಬ್ಲೆಟ್ ಪ್ಯಾಕೆಟ್ ಮಾದರಿಯಲ್ಲಿ ತಮ್ಮ ಮದುವೆ ಆಮಂತ್ರಣ ಪತ್ರಿಕೆ ಮಾಡಿದ್ದಾರೆ.

- Advertisement -


ವರನ ಹೆಸರು ಎಜಿಲರಸನ್. ವಧುವಿ ಹೆಸರು ವಸಂತಕುಮಾರಿ. 2022ರ ಸೆಪ್ಟೆಂಬರ್ 5ರಂದು ಮದುವೆ ನಡೆಯಲಿದ್ದು, ಎಲ್ಲ ಸ್ನೇಹಿತರು ಮತ್ತು ಬಂಧುಗಳು ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಈ ವಿಭಿನ್ನ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಮ್ಯಾನುಫ್ಯಾಕ್ಚರ್ ಬರೆಯುವ ಸ್ಥಳದಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರನ್ನೂ ಕೂಡ ನಮೂದಿಸಲಾಗಿದೆ.
ಇನ್ನು ತಮ್ಮ ಮದುವೆ ದಿನದ ವಿಶೇಷ ದಿನಗಳನ್ನೂ ಸ್ಮರಿಸಿದ್ದಾರೆ. ಅಂದು ಶಿಕ್ಷಕರ ದಿನ ಮತ್ತು ಮದರ್ ತೆರೇಸಾ ಸ್ಮರಣೆ ದಿನವಿದೆ ಎಂದು ಬರೆಯಲಾಗಿದೆ.



Join Whatsapp