ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆ ನಾಡಿನ ಗೌರವಕ್ಕೆ ಕಳಂಕ ಹಾಗೂ ಕರಾಳ ದಿನವೊಂದಕ್ಕೆ ಕಾರನವಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಗಾರಿದ್ದಾರೆ.
ವಿಧಾನಸೌಧಲ್ಲಿ ಮಾತನಾಡಿದ ಅವರು, ಕರ್ನಾಟಕದ ಈಗಿನ ರಾಜಕೀಯ ವಿದ್ಯಮಾನ ಯಾರಿಗೂ ಗೌರವ ತರುವುದಿಲ್ಲ. ಬಹಳ ಅನಾಗರಿಕ, ಅಗೌರವ ತರುತ್ತದೆ. ಈ ಘಟನೆಗೆ ಸಿಎಂ ಮೇಲೆ ಹೊರೆ ಹೊರಿಸುತ್ತಿಲ್ಲ. ಸಿಎಂಗೆ ಇಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಇಂತಹ ಘಟನೆಗಳಿಂದ ಅವರಿಗೆ ಒಳ್ಳೆಯ ಹೆಸರು ಬರುವುದಿಲ್ಲ, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಎಂದು ತಿಳಿಸಿದರು.