ಅನಧಿಕೃತ ಹೋಂ ಸ್ಟೇ ಗಳ ನಿಷೇಧ; ಹೋಂ ಸ್ಟೇ ಅಸೋಸಿಯೇಶನ್ ಆಗ್ರಹ

Prasthutha|

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ಹೋಂ ಸ್ಟೇ ಗಳಿಂದ ಅಧಿಕೃತ ಹೋಂ ಸ್ಟೇಗಳಿಗೆ ಸಮಸ್ಯೆಗಳುಂಟಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಹೋಂ ಸ್ಟೇ ಅಸೋಸಿಯೇಶನ್ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದರು.

- Advertisement -

ಜಿಲ್ಲೆಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿನೀಡುತ್ತಿದ್ದು, ಅಕ್ರಮವಾಗಿ ತಲೆ ಎತ್ತಿರುವ ಹೋಂ ಸ್ಟೇ ಗಳ ಮೇಲೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತವಾದ ಕ್ರಮಗಳನ್ನು ಜರುಗಿಸಿ ಇಂತಹ ಅನಧಿಕೃತ ಹೋಂ ಸ್ಟೇ ಗಳಿಂದ ಆಗಮಿಸುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.


ನೋಂದಣಿ ಮಾಡಿಕೊಂಡು ಆಗಮಿಸುವ ಪ್ರವಾಸಿಗರಿಗೆ ಉತ್ಕೃಷ್ಟ ಸೇವೆಗಳನ್ನು ನೀಡುತ್ತಿರುವ ಹೋಂ ಸ್ಟೇ ಗಳ ಮಾಲೀಕರಿಗೆ ಇತ್ತೀಚೆಗೆ ನಡೆದ ಬ್ಲ್ಯಾಕ್ ಮೇಲ್ ನಂತಹ ಪ್ರಕರಣಗಳು ಕಳಂಕ ಉಂಟುಮಾಡುತ್ತಿವೆ. ಇಂತಹ ಅಕ್ರಮ ಹಾಗೂ ಅನಧಿಕೃತ ಹೋಂ ಸ್ಟೇ ಗಳ ಮೇಲೆ ಕಾನೂನಿನ ಅಡಿಯಲ್ಲಿ ಕಠಿಣವಾದ ಕ್ರಮಗಳನ್ನು ಕೈಗೊಂಡು ಬೀಗ ಜಡಿಯುವಂತೆ ಆಗ್ರಹಿಸಿದರು.

- Advertisement -


ಜಿಲ್ಲಾಧಿಕಾರಿಗಳಾದ ಕೆ.ಎನ್ ರಮೇಶ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಮನವಿ ಸಲ್ಲಿಸಿದ ಅಸೋಸಿಯೇಶನ್ ನ ಪದಾಧಿಕಾರಿಗಳಿಗೆ ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್ ನ ಅಧ್ಯಕ್ಷರಾದ ಎನ್.ಆರ್ ತೇಜಸ್ವಿ, ಉಪಾಧ್ಯಕ್ಷ ಪ್ರವೀಣ್, ಹೊಲದಗದ್ದೆ ಗಿರೀಶ್, ಅನ್ಸಾರ್ ಜಹೂರ್, ಅಕ್ಷತಾ ಪ್ರಸನ್ನ, ವರುಣ್, ಅವರಂಗ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.



Join Whatsapp