ಬೆಂಗಳೂರು: ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರೇ ನಿಮಗೆ ಮತ್ತು ನಿಮ್ಮ ಪೊಲೀಸ್ ಇಲಾಖೆಗೆ ನರ ರೋಗ ಬಂದಿದೆಯೇ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಸರ್ಕಾರದ ವಿರುದ್ಧ ಗೃಹ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಹೊಲಸು ವ್ಯಕ್ತಿತ್ವದ ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಡಿಕೇರಿಯಲ್ಲಿ ದಾಳಿಗೆ ಮುಂದಾಗಿದ್ದನ್ನು ಸರಣಿ ಟ್ವೀಟ್ ಗಳಲ್ಲಿ ಖಂಡಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಬಜರಂಗಿಗಳು ಪೊಲೀಸರಿಗೆ ಬಾಯಿಗೆ ಬಂದಂತೆ ಬಯ್ಯುತ್ತಾ, ಕೆಟ್ಟದಾಗಿ ಛೀಮಾರಿ ಹಾಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ವರದಿಗಳಿವೆ. ಆದರೂ ಪೊಲೀಸ್ ಇಲಾಖೆ ಮತ್ತು ಗೃಹ ಮಂತ್ರಿಗಳು ನರ ರೋಗಕ್ಕೆ ತುತ್ತಾದವರಂತೆ ಬಿದ್ದಿದ್ದಾರೆ. ನಿಮ್ಮ ಹೇಡಿತನ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಪ್ರದರ್ಶಿಸಿದ್ದೀರಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪೆದ್ದು ಪೆದ್ದಾಗಿ ಆಡೋ ಗೃಹಮಂತ್ರಿ, ಹುಚ್ಚುಚ್ಚಾಗಿ ಆಡುವ ಮುಖ್ಯಮಂತ್ರಿ ಇರುವ ರಾಜ್ಯದಲ್ಲಿ ಪೊಲೀಸರು ವಸೂಲಿ ಮಾಡಿಕೊಂಡು ಮಲಗಿರ್ತಾರೆ ಎಂದು ಪ್ರಕಾಶ್ ರಾಥೋಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಎಂಜಲು ತಿಂದುಕೊಂಡು ನಾಯಿಗಳ ಹಾಗೆ ಬಿದ್ದಿರ್ತಾರೆ ಎಂದು ಸ್ವತಃ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರೇ ನೀಡಿದ ಹೇಳಿಕೆಯನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಗೃಹ ಸಚಿವರ ಈ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲೇ ಪ್ರಶ್ನಿಸಿ ಗೃಹ ಮಂತ್ರಿಗಳನ್ನು ಪೇಚಿಗೆ ಸಿಲುಕಿಸಿದ್ದರು.
ಯುವ ಕಾಂಗ್ರೆಸ್ ಲುಕ್ಮನ್ ಬಂಟ್ವಾಳ್ ಕೂಡ ಮಡಿಕೇರಿ ಘಟನೆಯನ್ನು ಖಂಡಿಸಿದ್ದು, ತಮ್ಮ ಕಾರ್ಯಕರ್ತರಿಂದಲೇ ಅಸಮರ್ಥ ಗೃಹ ಮಂತ್ರಿ ಎನ್ನಿಸಿಕೊಂಡಿರುವ ಆರಗ ಜ್ಞಾನೇಂದ್ರ ಅವರು ಕುರ್ಚಿಯಲ್ಲಿ ಇದ್ದಷ್ಟೂ ದಿನ ಇಂಥಾ ಛೀಮಾರಿಗಳನ್ನು ಹಾಕಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ ಎಂದು ಟ್ವೀಟ್ ಮಾಡಿ ಸಿದ್ದರಾಮಯ್ಯ ಅವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.