ಬಹರಾಯಿಚ್: ಶಿಕ್ಷಕನಿಂದ ತೀವ್ರವಾಗಿ ಹಲ್ಲೆಗೊಳಗಾಗಿ ಸುಮಾರು ಒಂಬತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ವರ್ಷದ ದಲಿತ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಹರಾಯಿಚ್ ನಲ್ಲಿ ನಡೆದಿದೆ.
ಘಟನೆಯ ಸಮಯದಲ್ಲಿ ಉಂಟಾದ ತೀವ್ರ ರಕ್ತಸ್ರಾವದಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಬಾಲಕನ ಸಹೋದರ ರಾಜೇಶ್ ವಿಶ್ವಕರ್ಮ ಸುದ್ದಿಗಾರರೊಂದಿಗೆ ಮಾತನಾಡಿ, “ಮಾಸಿಕ 250 ರೂ.ಗಳ ಶಾಲಾ ಶುಲ್ಕ ಪಾವತಿಸದ ಕಾರಣ ನನ್ನ ಸಹೋದರನನ್ನು ಆತನ ಶಿಕ್ಷಕ ಥಳಿಸಿದ್ದಾರೆ. ಆದರೆ, ನಾನು ಅದನ್ನು ಆನ್ ಲೈನ್ ನಲ್ಲಿ ಪಾವತಿಸಿದ್ದೆ. ಅದು ಅದನ್ನು ತಿಳಿದಿರದ ಶಿಕ್ಷಕ ಸರಿಯಾಗಿ ವಿಚಾರಿಸದೆ ನನ್ನ ಸಹೋದರನ ಮೇಲೆ ಕ್ರೂರವಾಗಿ ಹಲ್ಲೆಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಮೃತ ಬಾಲಕನ ಚಿಕ್ಕಪ್ಪ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದು, ದೂರಿನಲ್ಲಿ ಬಾಲಕ ದಲಿತನಾಗಿದ್ದರಿಂದ ಥಳಿಸಲಾಗಿದೆ ಎಂದು ಬಾಲಕನ ಕುಟುಂಬವು ಆರೋಪಿಸಿದೆ
ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಶ್ರಾವಸ್ತಿ ಎಸ್ಪಿ ಅರವಿಂದ್ ಕೆ ಮೌರ್ಯ ತಿಳಿಸಿದ್ದಾರೆ.