ಶಿವಮೊಗ್ಗದಲ್ಲಿ ನಡೆಯುತ್ತಿರುವ ಎಲ್ಲ ಅಹಿತಕರ ಘಟನೆಗಳಿಗೆ ಕೆ.ಎಸ್. ಈಶ್ವರಪ್ಪನವರೇ ನೇರ ಹೊಣೆ: SDPI

Prasthutha|

►ಶಿವಮೊಗ್ಗದ ಘಟನೆ ನ್ಯಾಯಾಂಗ ತನಿಖೆಗೆ ವಹಿಸಲು ಆಗ್ರಹ

- Advertisement -

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಘಟನೆಗಳಿಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ನೇರ ಹೊಣೆಗಾರರಾಗಿದ್ದು, ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಎಸ್ ಡಿ ಪಿ ಐ ಆಗ್ರಹಿಸಿದೆ.


ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಬ್ಯಾರೀಸ್ ಸಿಟಿ ಸೆಂಟರ್ ನಲ್ಲಿ ಶಿವಮೊಗ್ಗ ನಗರ ಸಭೆ ವತಿಯಿಂದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅದರಲ್ಲಿ ಸ್ವಾತಂತ್ರ್ಯ್ ಹೋರಾಟಗಾರರ ಫೋಟೊಗಳನ್ನು ಪ್ರದರ್ಶಿಸಲಾಗಿತ್ತು. ಅದರಲ್ಲಿ ಒಂದೇ ಒಂದು ಮುಸ್ಲಿಮ್ ಸ್ವಾತಂತ್ರ್ಯೇ ಹೋರಾಟಗಾರರ ಫೋಟೊ ಇರಲಿಲ್ಲ. ಆದರೆ ಅದರಲ್ಲಿ ಸಾವರ್ಕರ್ ಫೋಟೊ ಕೂಡ ಅಳವಡಿಸಲಾಗಿತ್ತು. ಎಸ್.ಡಿ.ಪಿ.ಐ ನಾಯಕರು ಮತ್ತು ಕಾಂಗ್ರೆಸ್ ಕಾರ್ಪೊರೇಟರ್ ಪತಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಹಳಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಸ್ವಾತಂತ್ರ್ಯಿಕ್ಕಾಗಿ ಹೋರಾಟ ನಡೆಸದ ಸಾವರ್ಕರ್ ಫೋಟೊ ಅಳವಡಿಸಲಾಗಿದೆ ಎಂದು ಸಾರ್ವಜನಿಕವಾಗಿ ಆಕ್ಷೇಪ ಕೇಳಿ ಬಂತು. ನಂತರದಲ್ಲಿ ಸಾವರ್ಕರ್ ಫೋಟೊ ತೆಗೆದು ಇಬ್ಬರು ಮುಸ್ಲಿಮ್ ಸ್ವಾತಂತ್ರ್ಯು ಹೋರಾಟಗಾರರ ಫೋಟೊ ಅಳವಡಿಸಲಾಯಿತು. ಆ ನಂತರ ಅಲ್ಲಿಗೆ ಬಂದ ಬಿಜೆಪಿ ಕಾರ್ಯಕರ್ತರು ಸಂಘರ್ಷಮಯ ವಾತಾವರಣ ಸೃಷ್ಟಿಸಿದರು. ಸ್ವಾತಂತ್ರ್ಯು ಹೋರಾಟಗಾರರ ಫೋಟೊ ತೆಗೆದು ಹಾಕಲು ಒತ್ತಡ ಹೇರಲಾಗುತ್ತಿದೆ ಎಂದು ಗುಲ್ಲೆಬ್ಬಿಸಿದರು. ಆದರೆ ಅಲ್ಲಿ ಸ್ವಾತಂತ್ರ್ಯರ ಹೋರಾಟಗಾರನಲ್ಲದ ಸಾವರ್ಕರ್ ಫೋಟೊ ತೆಗೆದು ಹಾಕಹಾಕಬೇಕು ಮತ್ತು ಮುಸ್ಲಿಮ್ ಸ್ವಾತಂತ್ರ್ಯಿ ಹೋರಾಟಗಾರ ಫೋಟೋ ಅಳವಡಿಸಬೇಕೆಂಬ ಆಗ್ರಹ ಮಾಡಲಾಗಿತ್ತೇ ವಿನಃ ಇತರ ಯಾವುದೇ ಸ್ವಾತಂತ್ರ್ಯಿ ಹೋರಾಟಗಾರರ ಫೋಟೆ ತೆಗೆದಿರಲಿಲ್ಲ. ಅದೇ ದಿನ ಸಂಜೆ 4 ಗಂಟೆಗೆ ಸಿಟಿ ಸೆಂಟರ್ ಶಾಪಿಂಗ್ ಮಾಲ್ ನ ಹೊರಗಡೆ ಮೇಯರ್ ಸ್ಮಿತಾ ಅಣ್ಣಪ್ಪ ಮತ್ತು ಆಕೆಯ ಪತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಆ ಪ್ರತಿಭಟನೆಯಲ್ಲಿ ಉದ್ರೇಕಕಾರಿ ಭಾಷಣಗಳನ್ನು ನಡೆಸಲಾಯಿತು ಎಂದು ಅವರು ಹೇಳಿದರು.

- Advertisement -


ಬಜರಂಗದಳ ನಾಯಕರಾದ ನಾಗೇಶ್, ಶಿವು ಮತ್ತು ದೀನ್ ದಯಾಳ್ ನೇತೃತ್ವದ ತಂಡ ಸಿಟಿ ಸೆಂಟರ್ ಮಾಲ್ ಗೆ ನುಗ್ಗಿ ಅಲ್ಲಿದ್ದ ಮುಹಮ್ಮದ್ ಅಲ್ಫಾಝ್ ಎಂಭ ಅಪ್ರಾಪ್ತ ವಯಸ್ಸಿನ ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಾರೆ. ಘಟನೆಗೆ ಸಂಬಂಧಿಸಿ ಕನ್ನಡ ಪರ ಸಂಘಟನೆಯ ಅಧ್ಯಕ್ಷ ಹಾಗೂ ಹಾಲಿ ಕಾರ್ಪೊರೇಟರ್ ಪತಿ ಆಸಿಫ್ ಶರೀಫ್ ರನ್ನು ಬಂಧಿಸಲಾಗುತ್ತದೆ. ಆಸಿಫ್ ಶರೀಫ್ ರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಠಾಣೆಯ ಮುಂಭಾಗದಲ್ಲಿ ಜನರು ಜಮಾವಣೆಗೊಳ್ಳುತ್ತಾರೆ. ಆದರೆ ಅವರನ್ನು 14ರಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತದೆ ಎಂದು ಅವರು ವಿವರಿಸಿದರು.
ನಂತರ ಮರುದಿನ ಅಂದರೆ ಆಗಸ್ಟ್ 15ರಂದು ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಮತ್ತು ಶಿವಮೊಗ್ಗ ಇತರ ಕಡೆಗಳಲ್ಲಿ ಸ್ವಾತಂತ್ರ್ಯೋ ತ್ಸವ ಆಚರಣೆ ನಡೆದಿತ್ತು. ಅಮೀರ್ ಅಹ್ಮದ್ ಸರ್ಕಲ್ ಸಮೀಪವಿರುವ ಅಶೀರ್ ಖಾನಾದ ಮುಂಭಾಗದಲ್ಲಿ ವರ್ಷಂಪ್ರತಿ ಮುಸ್ಲಿಮ್ ನಾಯಕರು ಧ್ವಜಾರೋಹಣಾ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮ ಏರ್ಪಡಿಸಿಕೊಂಡು ಸ್ವಾತಂತ್ರ್ಯಾ ದಿನ ಆಚರಿಸುತ್ತಿದ್ದರು. ಎಂದಿನಂತೆ ಈ ಬಾರಿಯೂ ಅಲ್ಲಿ ಬಹಳಷ್ಟು ಸ್ವಾತಂತ್ರ್ಯೋ ತ್ಸವ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಅಮೀರ್ ಅಹ್ಮದ್ ಸರ್ಕಲ್ ಮುಸ್ಲಿಮ್ ಬಾಹುಳ್ಯ ವಿರುವ ಪ್ರದೇಶವಾಗಿದ್ದು, ಮುಸ್ಲಿಮರು ಯಾವುದೇ ಕಾರ್ಯಕ್ರಮವನ್ನು ಇಲ್ಲಿಯೇ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಅಮೀರ್ ಅಹ್ಮದ್ ಸರ್ಕಲ್ ಬಳಿಯಲ್ಲಿಯೇ ಶಿವಪ್ಪ ನಾಯಕ ಸರ್ಕಲ್ ಇದೆ. ಅಲ್ಲೆ ಹತ್ತಿರದಲ್ಲಿ ಗೋಪಿ ಸರ್ಕಲ್ ಇದೆ. ಅವೆರಡು ಸರ್ಕಲ್ ಗಳಲ್ಲಿ ಬಿಜೆಪಿ-ಸಂಘಪರಿವಾರದವರು ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಅಲ್ಲಿ ಅವರು ಸಾವರ್ಕರ್ ಫೋಟೊ ಅಳವಡಿಸಿದ್ದರೂ ಯಾರದೇ ಆಕ್ಷೇಪ ಇರಲಿಲ್ಲ. ಆದರೆ ಮಧ್ಯಾಹ್ನ 1.30ರ ವೇಳೆ ದೀನ್ ದಯಾಳ್, ಕಾರ್ಪೋರೇಟರ್ ಚೆನ್ನ ಬಸಪ್ಪ ಮತ್ತು ಇತರ ಸಂಘಪರಿವಾರದ ನಾಯಕರ ನೇತೃತ್ವದಲ್ಲಿ ತಂಡವೊಂದು ಮುಸ್ಲಿಂ ಸಮುದಾಯದ ವಿರುದ್ಧ ಘೋಷಣೆ ಕೂಗುತ್ತಾ ಸಾಗಿ ಬಂದು ಅದೇ ವೃತ್ತದಲ್ಲಿ ಸಾವರ್ಕರ್ ನ ದೊಡ್ಡ ಕಟೌಟ್ ಅಳವಡಿಸುತ್ತಾರೆ. ಬಹಳಷ್ಟು ಪೊಲೀಸರು ಅಲ್ಲಿ ಕರ್ತವ್ಯದಲ್ಲಿದ್ದು, ಅವರ ಸಮ್ಮುಖದಲ್ಲೇ ಅಲ್ಲಿ ಕಟೌಟ್ ಅನ್ನು ಅಳವಡಿಸುತ್ತಾರೆ.

ಆದರೆ ಬೇರೆ ಯಾವುದೇ ಸ್ವಾತಂತ್ರ್ಯ್ ಹೋರಾಟಗಾರರ ಭಾವಚಿತ್ರ ಅಳವಡಿಸಿರಲಿಲ್ಲ. ಸ್ವಾತಂತ್ರ್ಯತ ಆಚರಣೆಗೆ ಸೇರಿದ್ದ ಜನರ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಕಟೌಟ್ ತೆಗೆಯಲು ಹೋದಾಗ ಪೊಲೀಸರು ಅವರನ್ನು ತಡೆಯುತ್ತಾರೆ. ಸಂಘಪರಿವಾರದ ನಾಯಕರ ಪ್ರಚೋದನೆಯಿಂದಾಗಿ ಪರಿಸ್ಥಿತಿ ಸಂಪೂರ್ಣವಾಗಿ ಬಿಗಡಾಯಿಸಿತ್ತದೆ. ಈ ನಡುವೆ ಬಜರಂಗ ದಳದ ನಾಯಕ ಪೊಲೀಸರಿಗೆ ಏಕವಚನದಲ್ಲಿ ನಿಂದಿಸುತ್ತಿರುವುದು ಕಂಡು ಬಂತು. ದೀನ್ ದಯಾಳ್ ಎಂಬಾತ ಇಡೀ ಶಿವಮೊಗ್ಗಕ್ಕೆ ಬೆಂಕಿ ಹಚ್ಚುವ ಬೆದರಿಕೆ ಹಾಗೂ ಪ್ರಚೋದನೆ ನೀಡಿದ ವಿಡಿಯೋ ಕೂಡ ವೈರಲ್ ಆಗಿದೆ ಎಂದು ಅಫ್ಸರ್ ಅಂದಿನ ಘಟನೆಯನ್ನು ವಿವರಿಸಿದರು.


ಆ ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರು. ಆದರೆ ಮುಸ್ಲಿಮ್ ಯುವಕರನ್ನು ಸ್ಥಳದಿಂದ ತೆರವುಗೊಳಿಸಿದ ಪೊಲೀಸರು ಅಲ್ಲಿದ್ದ ಬಜರಂಗ ದಳದ ಸದಸ್ಯರನ್ನು ಚದುರಿಸುವ ಕೆಲಸ ಮಾಡಲಿಲ್ಲ. ಜೊತೆಗೆ ಅವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಇವೆಲ್ಲದರ ಮಧ್ಯೆ ಸದ್ದಾಂ ಅನ್ನುವ ಮುಸ್ಲಿಮ್ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ವಿಚಾರ ಕೇಳಿ ಬಂತು. ಅದಾದ ಬಳಿಕ ಎರಡೂ ಕಡೆಯಿಂದ ಚೂರಿ ಇರಿತ ನಡೆದಿರುವ ವಿಚಾರ ಕೇಳಿ ಬರುತ್ತದೆ. ಟಿವಿ ಚಾನೆಲ್ ಗಳಲ್ಲಿ ಬಜರಂಗ ದಳದ ಯುವಕರ ಮೇಲೆ ನಡೆಸಿದ ದಾಳಿಯನ್ನು ಎತ್ತಿ ತೋರಿಸಲಾಗಿದೆಯೇ ವಿನಃ ಬಜರಂಗ ದಳದ ಸದಸ್ಯರು ಅನಗತ್ಯವಾಗಿ ಅಮೀರ್ ಅಹ್ಮದ್ ಸರ್ಕಲ್ ಬಳಿ ಸಾವರ್ಕರ್ ಫೋಟೋ ಅವಳವಡಿಸಿದ್ದಾಗಲೀ, ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಸಿದ್ದಾಗಲೀ, ಮುಸ್ಲಿಮ್ ಯುವಕನಿಗೆ ಗಂಭೀರವಾಗಿ ಥಳಿಸಿದ ವಿಚಾರ ಪ್ರಸಾರವಾಗುವುದೇ ಇಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಾ ಹೋದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕಾಗಿ ಲಾಠಿ ಚಾರ್ಜ್ ನಡೆಸಿ ಭಾರೀ ಸಂಖ್ಯೆ ಯಲ್ಲಿ ಸೇರಿದ್ದ ಬಜರಂಗ ದಳದ ಸದಸ್ಯರನ್ನು ಅಲ್ಲಿಂದ ಚದುರಿಸಿದರು. ಮತ್ತೊಂದೆಡೆ ಗುಂಪುಗೂಡಿದ್ದ ಮುಸ್ಲಿಮ್ ಯುವಕರನ್ನೂ ತೆರವುಗೊಳಿಸಿದರು. ಈ ವೇಳೆ ಅಲ್ಲೇ ಸರ್ಕಲ್ ನಲ್ಲಿದ್ದ ಬಜರಂಗದ ದಳದ 8-10 ಮಂದಿ ರೌಡಿಶೀಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಜೊತೆಗೆ ಕೆಲವೊಂದು ಮುಸ್ಲಿಮ್ ಯುವಕರನ್ನು ಬಂಧಿಸಿದರು.


ಚೂರಿ ಇರಿತ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದೆ. ಈ ಪೈಕಿ ಝಬೀವುಲ್ಲಾ ಎಂಬವರನ್ನು ರಾತ್ರಿ 9 ಗಂಟೆಗೆ ಅವರ ಮನೆಯಿಂದಲೇ ಪೊಲೀಸರು ಬಂಧಿಸಿದ್ದಾರೆ. ಕೇವಲ ವಿಚಾರಣೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಪೊಲೀಸರು ಮನೆಮಂದಿಗೆ ತಿಳಿಸಿ. ಮಧ್ಯರಾತ್ರಿ 2.30ರ ಸುಮಾರಿಗೆ ಪೊಲೀಸರು ಕಣ್ಣಿಗೆ ಬಟ್ಟೆ ಕಟ್ಟಿ ಝಬೀವುಲ್ಲಾನನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ ನಂತರ ಆತನನ್ನು ಚಿಕಿತ್ಸೆಗಾಗಿ ಪೊಲೀಸರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದು ಬಿಜೆಪಿ-ಬಜರಂಗ ದಳದ ನಾಯಕರು ಮತ್ತು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಪೊಲೀಸರು ನಡೆಸಿರುವ ವ್ಯವಸ್ಥಿತ ಪಿತೂರಿ ಎಂದು ಅಫ್ಸರ್ ಆರೋಪಿಸಿದರು.
ಭದ್ರಾವತಿಯಲ್ಲಿ ಬಜರಂಗ ದಳದ ಕಾರ್ಯಕರ್ತನ ಮೇಲೆ ನಡೆದ ದಾಳಿಯನ್ನು ಇದೇ ಘಟನೆಗೆ ಸಮೀಕರಿಸಲಾಗುತ್ತಿದೆ. ಆದರೆ ಅದು ಮುಬಾರಕ್ ಮತ್ತು ಸುನೀಲ್ ಎಂಬ ಇಬ್ಬರು ಯುವಕರ ನಡುವೆ ಜೂಜಾಟದ ವಿಚಾರದಲ್ಲಿ ನಡೆದ ಜಗಳವಾಗಿತ್ತು. ಆದರೆ ಈ ಘಟನೆಗೂ ಹಿಂದು-ಮುಸ್ಲಿಮ್ ಬಣ್ಣ ಹಚ್ಚಿ ಶಿವಮೊಗ್ಗದಲ್ಲಿ ಮತ್ತಷ್ಟು ಪ್ರಕ್ಷುಬ್ಧ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಸಲಾಯಿತು. ಈ ಎಲ್ಲ ಘಟನೆಗಳ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಿಯಾಝ್, ಮಜೀದ್ ಖಾನ್ ಉಪಸ್ಥಿತರಿದ್ದರು.



Join Whatsapp